ಉತ್ಕಟ

ಉತ್ಕಟ

ಬೆಳಕು ಮೂಡಬೇಕು
ಕತ್ತಲ ಬೆನ್ನತ್ತಿ ಓಡಿಸಬೇಕು
ದಿಗಿಲುಗೊಂಡ ಮನಕ್ಕೆ
ತುಸು ನೆಮ್ಮದಿ ನೀಡಬೇಕು.

ಆಶಾಕಿರಣ ಮೂಡಬೇಕು
ಮುಂಚೆಯೇ ನಂದಬಾರದು
ಗೊಣಗುವ ಕದಡುವ ದುಷ್ಟ
ರಕ್ಕಸ ಮನಗಳ ಮಣಿಸಬೇಕು.

ತಾಳ್ಮೆಯ ಮುಂದೆ ದುಷ್ಟಬುದ್ಧಿ ಮಂಡಿಯೂರಿ
ಪಶ್ಚಾತ್ತಾಪದಿ ಕಣ್ಣ ಹನಿಸಬೇಕು
ಒಳ್ಳೆಯತನ ಪ್ರಫುಲ್ಲವಾಗಿ
ಹಬ್ಬಬೇಕು ನಳನಳಿಸಬೇಕು.

ಪಾರ್ಥೇನಿಯಂನಂಥ ಕೆಟ್ಟತನ
ತನಗೆ ತಾನೇ ನಶಿಸಬೇಕು?
ಶಿಥಿಲಗೊಳ್ಳಬೇಕು ದಂತಕಥೆಯಾಗಬೇಕು.


ಸುಕನ್ಯ ತ್ಯಾವಣಿಗೆ
9986328069