ಕಲರವ

ಕಲರವ

ಹೇ… ಕರುಣಾಕರ
ನೀನೆಂಥ ವರ್ಣರಂಜಿನ ಕಲಾಕಾರ
ನಿನ್ನ ಕಲ್ಪನೆ ಅದೆಷ್ಟು ಸೊಗಸು
ಅಷ್ಟೇ ಅಂದ ನೀ ಸೃಷ್ಟಿಸಿದ ಸೊಗಸು.

ನವಿಲಿನ ಅಂದ ನೋಡಿದಾಗಲೇ ಚಂದ
ಕೊರಳ ನೀಲಿ ಕಡುಕಪ್ಪು ಕಣ್ಣ ಅಲಿ
ತಲೆಯ ಮೇಲಿಟ್ಟಿರುವ ಕಿರೀಟವಂತೆ.

ನೋಡಿದಷ್ಟು ಬಣ್ಣಬಣ್ಣ ಕಣಿಗೆ ಹಬ್ಬದಂತೆ
ಗರಿಗಳೆಷ್ಟು ಸೊಗಸು ನೀಲಿ ಹಸಿರಿನ
ಹೃದಯದಾಕಾರದಿ ಸುತ್ತ ಬಂಗಾರದ ಲೇಪನ.

ಗರಿಗಳ ಹರಡಿ ಕುಣಿವ ನವಿಲಿನ
ಮಯೂರ ನರ್ತನ
ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ
ನವಿಲಿಗೆ ನವಿಲೇ ಸರಿಸಾಟಿ
ಆ ಚಿತ್ರಕಲೆಗೆ ನೀನೇ ಸರಿಸಾಟಿ.


ಸುಕನ್ಯ ತ್ಯಾವಣಿಗೆ
9986328069