ಶಾಲೆ ಹೆಚ್ಚೇ….

ಶಾಲೆ ಹೆಚ್ಚೇ….

ಶಾಲೆ ಶಾಲೆ ಶಾಲೆ
ಮಕ್ಕಳಿಗೆ ಮತ್ತೆ ಶಾಲೆ
ಆರೋಗ್ಯಕ್ಕಿಂತ ಹೆಚ್ಚೆ ಶಾಲೆ
ಬೇಡ ಪ್ರಯಾಸದ ಪ್ರಯತ್ನ
ಮಕ್ಕಳಿಗೆ ದೂರ ದೂರ ಇರಬೇಕೆಂದು
ಅರ್ಥವಾಗದ ವಿಷಯವಿದು
ಅಂತರ್ಜಾಲ ವಿದ್ಯಾಭ್ಯಾಸ
ಮುಂದುವರಿಯಲಿ ಸ್ವಲ್ಪ ದಿವಸ
ಪೋಷಕರಿಗೆ ಬುದ್ಧಿ ಹೇಳಿ
ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ
ಕೂಲಿಗೆ ಕಳಿಸುವವರಿಗೆ
ಕಠಿಣ ಶಿಕ್ಷೆ ನೀಡಿ
ಮನೆಯಲ್ಲೇ ವಿದ್ಯಾಭ್ಯಾಸ ಕೊಡಿಸಲು ಸಲಹೆ ಕೊಡಿ
ಅಂತರ್ಜಾಲದಲ್ಲಿ ಸಮಸ್ಯೆ ಇದೆ
ಆದರೆ ಆರೋಗ್ಯಕ್ಕಿಂತ ಹೆಚ್ಚೆ
ಮಕ್ಕಳೇ ಮನೆಗೆ ಮಾಣಿಕ್ಯ
ಅವರ ಆರೋಗ್ಯ ಕಾಪಾಡುವುದು ಎಲ್ಲರ ಹೊಣೆ.


ಕೋಮಲ  ವಸಂತ ಕುಮಾರ್