ವಿದ್ಯಾರ್ಥಿಗಳಿಗೆ ಚನ್ನಮ್ಮನ ಧೈರ್ಯವು ಪ್ರೇರಣೆಯಾಗಲಿ

ವಿದ್ಯಾರ್ಥಿಗಳಿಗೆ ಚನ್ನಮ್ಮನ ಧೈರ್ಯವು ಪ್ರೇರಣೆಯಾಗಲಿ

ರಾಜ್ಯ ಪಂಚಮಸಾಲಿ ಸಮಾಜದ ಯುವ ಘಟಕದ ಮಾಜಿ ಅಧ್ಯಕ್ಷ ಪಟ್ಟಣಶೆಟ್ಟಿ ಪರಮೇಶ್ ಆಶಯ

ಹೊನ್ನಾಳಿ, ಅ.23 – ಕಿತ್ತೂರು ರಾಣಿ ಚೆನ್ನಮ್ಮನ ಧೈರ್ಯ ಸಾಹಸ ಮನೋಭಾವವು ಇಂದಿನ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಲಿ ಎಂಬುದಾಗಿ ರಾಜ್ಯ ಪಂಚಮಸಾಲಿ ಸಮಾಜದ ಯುವ ಘಟಕದ ಮಾಜಿ ಅಧ್ಯಕ್ಷ  ಪಟ್ಟಣಶೆಟ್ಟಿ ಪರಮೇಶ್ ಹೇಳಿದರು.

ಇಲ್ಲಿನ ಕಿತ್ತೂರು ಚನ್ನಮ್ಮ ಪಂಚಮ ಸಾಲಿ ಯುವಕರ ಸಂಘದಿಂದ ನಡೆದ 197ನೇ ಕಿತ್ತೂರು ಚನ್ನಮ್ಮ ವಿಜಯೋತ್ಸವ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನಿಸಿ ಮಾತನಾಡಿದರು.

ಶಿಕ್ಷಕ ಕೆ.ವಿ. ಪ್ರಸನ್ನ ಮಾತನಾಡಿ, ಕಿತ್ತೂರು ಚನ್ನಮ್ಮ ಎಂಬ ವಿಷಯವಾಗಿ ಉಪನ್ಯಾಸ ನೀಡಿ ಪಂಚಮಸಾಲಿ ಸಮಾಜ ಸುಧಾರಣೆಯಾಗಲು ಹಲವಾರು ಮಾರ್ಪಾ ಡುಗಳನ್ನು ಕಂಡುಕೊಳ್ಳಬೇಕಿದೆ ಎಂಬು ದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರು. 

ಶಿಕ್ಷಕ ಗಿರೀಶ್‍ನಾಡಿಗ್ ಮಾತನಾಡಿ, ಪಂಚಮಸಾಲಿ ಸಮಾಜದ ಮೂಲ ಉದ್ದೇಶ ಬೆಳವಣಿಗೆ ಮತ್ತು ಅದರ ಮಹತ್ವದ ಬಗ್ಗೆ ವಿವರಿಸಿದರು.

`ಜನತಾವಾಣಿ’ ವರದಿಗಾರ ಮೃತ್ಯುಂ ಜಯ ಪಾಟೀಲ್ ಮಾತನಾಡಿ, ಕಿತ್ತೂರು ಚನ್ನಮ್ಮ ಪಂಚಮಸಾಲಿ ಯುವಕರ ಸಂಘವು ಗಿರೀಶ್‍ ಅವರ ಅಧ್ಯಕ್ಷತೆಯಲ್ಲಿ ರಚನೆ ಗೊಂಡು ಇದೇ ಮೊದಲ ಬಾರಿ ಸಮಾಜದ ಪ್ರತಿಭಾನ್ವಿತ ಮಕ್ಕಳ ಸನ್ಮಾನಿಸುವ ಕಾರ್ಯ ಹಮ್ಮಿಕೊಂಡಿದೆ ಎಂದು ಹೇಳಿದರು.

ನಿವೃತ್ತ ಪೊಲೀಸ್ ಶೇಖರಪ್ಪ, ದೊಡ್ಡಪೇಟೆ 91 ವರ್ಷದ ಕುಂಕೋದ ಕೊಟ್ರಮ್ಮ ಅವರನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಪ್ರತಿಭಾನ್ವಿತ ಮಕ್ಕಳಾದ  ಶ್ರೀನಿಧಿಪಾಟೀಲ್, ಕಿರಣಾ, ಐಶ್ವರ್ಯ, ರಾಜೇಶ್, ರುದ್ರೇಶ್, ಪವನ್, ಧನುಶ್ರೀ, ಚೇತನ್ ಪಿಯುಸಿ ವಿದ್ಯಾರ್ಥಿಗಳಾದ ಚನ್ನೇಶ್ ಸಂಜನಾ, ಶೃತಿ ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಯುವ ಘಟಕದ ಅಧ್ಯಕ್ಷ ಹೋಟೆಲ್ ಗಿರೀಶ್ ವಹಿಸಿದ್ದರು. ಅತಿಥಿಗಳಾಗಿ ಪಂಚಾಯಿತಿ ಸದಸ್ಯೆ ಪದ್ಮಾ ಪ್ರಶಾಂತ್, ರೈತ ಮುಖಂಡ ಬಸವರಾಜಪ್ಪ, ಹಿರೇಮಠದ ಕಾಯಿ ಬಸಣ್ಣ, ಮಠದ ರಾಜಣ್ಣ, ಕುಂಕೋದ್ ಹಾಲೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಮಾಜದ ಯುವಕರು ಬೈಕ್ ರಾಲಿ ಮೂಲಕ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ  ಹಾರ ಹಾಕುವ ಮೂಲಕ ಚನ್ನಮ್ಮನ ಸಹಾಯಕನಾಗಿದ್ದ ಸಂಗೊಳ್ಳಿ ರಾಯಣ್ಣನಿಗೆ ಗೌರವ ಸಲ್ಲಿಸಲಾಯಿತು.