ಮಲೇಬೆನ್ನೂರಿನಲ್ಲಿ 76 ಜನರಿಗೆ ಕೋವಿಡ್‌ ಟೆಸ್ಟ್‌

ಮಲೇಬೆನ್ನೂರಿನಲ್ಲಿ  76 ಜನರಿಗೆ ಕೋವಿಡ್‌ ಟೆಸ್ಟ್‌

ಮಲೇಬೆನ್ನೂರು, ಜೂ.27- ಕೊರೊನಾ ವೈರಸ್‌ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುರ ಸಭೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಮುಂಜಾಗ್ರತಾ ಕ್ರಮವಾಗಿ 50 ವರ್ಷ ಮೇಲ್ಪಟ್ಟವರ ಹಾಗೂ ಪೌರ ಕಾರ್ಮಿಕರ ಗಂಟಲು ದ್ರವ ಪರೀಕ್ಷೆ ಶನಿವಾರವೂ ನಡೆಯಿತು. ಇದುವರೆಗೂ ಒಟ್ಟು 76 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ವರದಿ ಸೋಮವಾರ ಬರುವ ಸಾಧ್ಯತೆ ಇದೆ ಎಂದು ಪುರಸಭೆ ಆರೋಗ್ಯಾಧಿಕಾರಿ ಗುರುಪ್ರಸಾದ್‌ ತಿಳಿಸಿದ್ದಾರೆ.

ವಾರ್ಡ್‌ ನಂ.12 ರಲ್ಲಿ 15, ವಾರ್ಡ್‌ 13 ರಲ್ಲಿ 13 ಮತ್ತು ವಾರ್ಡ್‌ ನಂ.20 ರಲ್ಲಿ 26 ಜನರ ಹಾಗೂ ಪೌರ ಕಾರ್ಮಿಕರ, ನೀರು ಸರಬರಾಜು ಸಹಾಯಕರ, ವಾಹನ ಚಾಲಕರ ಗಂಟಲು ದ್ರವವನ್ನು ಟೆಸ್ಟ್‌ ಮಾಡಲಾಗಿದೆ.  ಪುರಸಭೆ ಸದಸ್ಯ ಬಿ. ಸುರೇಶ್‌ ಅವರು ಸ್ವಯಂ ಪ್ರೇರಿತರಾಗಿ ಕೋವಿಡ್‌ ಟೆಸ್ಟ್‌ ಮಾಡಿಸುವ ಮೂಲಕ ಗಮನ ಸೆಳೆದರು.