ನಂದಿ ಪತ್ತಿನ ಸಹಕಾರ ಸಂಘ ಸೌಹಾರ್ದ ಸಹಕಾರಿಯಾಗಿ ಪರಿವರ್ತನೆ

ಮಲೇಬೆನ್ನೂರು, ಜೂ.27- ಪಟ್ಟಣದಲ್ಲಿ 1993-94 ರಲ್ಲಿ ಪ್ರಾರಂಭವಾದ ಶ್ರೀ ನಂದಿ ಪತ್ತಿನ ಸಹಕಾರ ಸಂಘವನ್ನು `ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತ’ ಎಂದು ಕಳೆದ ಮಾರ್ಚ್‌ 2 ರಂದು ಪರಿವರ್ತನೆಗೊಳಿಸಲಾಗಿರುತ್ತದೆ.

ಈ ಸಂಘವು ಬರುವ ಜುಲೈ 1 ರಿಂದ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತ ಎಂಬ ಹೆಸರಿನೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಸಂಘದ ಸದಸ್ಯರು, ಗ್ರಾಹಕರು ಪರಿವರ್ತ ನೆಗೊಂಡಿರುವ ಈ ಹೆಸರಿನಲ್ಲಿ ವ್ಯವಹರಿಸುವಂತೆ ಆಡಳಿತ ಮಂಡಳಿ ಅಧ್ಯಕ್ಷ ಜಿಗಳಿಯ ಜಿ.ಎಂ. ವಿಜಯಕುಮಾರ್, ಕಾರ್ಯದರ್ಶಿ ಹೆಚ್‌.ಎಂ. ಬಸವರಾಜ್ ತಿಳಿಸಿದ್ದಾರೆ. ಈ ಸಂಬಂಧ ಶನಿವಾರ ನಡೆದ ಸಭೆಯಲ್ಲಿ ಸಂಘದ ನಿರ್ದೇಶಕರಾದ ಜಿಗಳಿ ಇಂದೂಧರ್, ಹಳ್ಳಿಹಾಳ್‌ ವೀರನಗೌಡ, ಬಿ.ಕೆ. ಮಹೇಶ್ವರಪ್ಪ, ಎ. ಆರೀಫ್‌ ಅಲಿ, ಜಿ.ಬಿ. ರಾಜಶೇಖರ್, ಹೆಚ್. ಆನಂದಯ್ಯ, ವೃತ್ತಿಪರ ನಿರ್ದೇಶಕ ಬಿ. ವೀರಯ್ಯ ಭಾಗವಹಿಸಿದ್ದರು.