ರಾಣೇಬೆನ್ನೂರಿನಲ್ಲಿ ಜೆಸಿಐನಿಂದ ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ

ರಾಣೇಬೆನ್ನೂರು, ಜೂ.24- ಜೆಸಿಐ ರಾಣೇಬೆನ್ನೂರು ಹಾಗೂ ರಾಣೇಬೆನ್ನೂರು ಜೇಸಿಸ್ ಕ್ಷೇಮಾ ಭಿವೃದ್ಧಿ ಸೊಸೈಟಿ ಸಹಯೋಗದಲ್ಲಿ ಕೋವಿಡ್-19ರ ಪರಿಣಾಮವಾಗಿ ದುಡಿಯುತ್ತಿರುವ 11 ಜನ ಆಶಾ ಕಾರ್ಯಕರ್ತೆಯರಿಗೆ ತಲಾ 3,000 ರೂ. ಮೊತ್ತದ ಸಹಾಯ ಧನವನ್ನು ಜೇಸಿಸ್ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಯಿತು.

ಸಹಾಯಧನವನ್ನು ಜೆಸಿ ಸದಸ್ಯರಾದ ಶ್ರೀನಿವಾಸ ಡಿ ಕಾಕಿ, ಹೆಚ್.ಎನ್. ದೇವಕುಮಾರ್, ಶಿವರುದ್ರಪ್ಪ, ಸಿದ್ದಣ್ಣ ಅಥಡಕರ, ಜೇಸಿಸ್ ಸೊಸೈಟಿಯವರು ನೀಡಿ ದರು. ಜೆಸಿ ಅಧ್ಯಕ್ಷ ಶಿವರುದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂರ್ವಾಧ್ಯಕ್ಷರಾದ ಡಾ. ಎಸ್.ಎಸ್. ಹಿತ್ತಲಮನಿ, ಎಫ್.ಎಚ್. ಗಚ್ಚಿನಮಠ ಮಾತನಾಡಿದರು.

ಸೊಸೈಟಿ ಅಧ್ಯಕ್ಷ ಹಾಗೂ ಜೆಸಿ ಪೂರ್ವಾಧ್ಯಕ್ಷ ಶ್ರೀನಿವಾಸ ಡಿ. ಕಾಕಿ ಹಾಜರಿದ್ದರು. ಸಿದ್ಧಣ್ಣ ಅಥಡಕರ, ಲಕ್ಷ್ಮಣ ಕನಕಿ, ಪ್ರಭು ಎಳೆಹೊಳೆ, ಪ್ರವೀಣ ಸುರಹೊನ್ನೆ, ಪ್ರಕಾಶ ಬನ್ನಿಕೋಡ, ಪ್ರಕಾಶ ಹಿರೇ ಕೆರೂರು, ಆರ್.ವಿ. ಪಾಟೀಲ್  ಮತ್ತಿತರರು ಹಾಜರಿದ್ದರು.