ಗ್ರಹಣ ಸೌರಮಂಡಲದಲ್ಲಿ ನಡೆಯುವ ವಿಸ್ಮಯ

ಗ್ರಹಣ ಸೌರಮಂಡಲದಲ್ಲಿ ನಡೆಯುವ ವಿಸ್ಮಯ

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಬಸವರಾಜ ಸಂಗಪ್ಪನವರ್ ಅಭಿಮತ

ಹರಪನಹಳ್ಳಿ, ಜೂ.21- ಗ್ರಹಣ ಸೌರ ಮಂಡಲದಲ್ಲಿ ನಡೆಯುವ ವಿಶೇಷ ವಿಸ್ಮಯ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಬಸವರಾಜ ಸಂಗಪ್ಪನವರ್ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕು ಘಟಕದ ವತಿಯಿಂದ ಕಂಕಣ ಸೂರ್ಯಗ್ರಹಣವನ್ನು ಸಾಮೂಹಿಕವಾಗಿ ಸಿಹಿ ಸೇವಿಸಿ, ಸೋಲಾರ ಫಿಲ್ಟರ್ ಕನ್ನಡಕದ ಮೂಲಕ ವೀಕ್ಷಣೆ ಮಾಡಿ  ಗ್ರಹಣ ಸಂಭ್ರಮಿಸಿದ ನಂತರ ಮಾತನಾಡಿ, ಗ್ರಹಣವಾಗುವುದರಲ್ಲಿ ಯಾವುದೇ ಮೂಢನಂಬಿಕೆ  ಇಲ್ಲ. ಇಂತಹ ಪ್ರಸಂಗದ ಬಗ್ಗೆ ಅನೇಕರು ಮುಗ್ಧ ಜನರಲ್ಲಿ ಭಯ ಮೂಡಿಸುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಜನರು ಈ ಕುರಿತು ವೈಚಾರಿಕತೆ  ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಗ್ರಹಣದ ಸಂದರ್ಭದಲ್ಲಿ  ಕಾರ್ಯ ಕರ್ತರು ಪೇಡಾ ಸೇವಿಸಿ, ಮೌಢ್ಯ ತೊಲಗಿಸಲು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಮುಖಂಡರಾದ ಮಾಲತೇಶ ಮರಿಗೌಡರು, ತೆಲಿಗಿ ಟಿ. ಉಮಾಕಾಂತ, ಮಹಾಂತೇಶನಾಯ್ಕ, ಪ್ರವೀಣ ಗಂಟಿ, ಶಿಕ್ಷಕರ ಸಂಘದ ಅಧ್ಯಕ್ಷ
ಕೆ.ಅಂಜಿನಪ್ಪ ಸೇರಿದಂತೆ ಇತರರು ಹಾಜರಿದ್ದರು.