ಹೊನ್ನಾಳಿ : ಹೊರ ರಾಜ್ಯದವರನ್ನು ವಾಪಸ್ ಕಳಿಸಿದ ತಾಲ್ಲೂಕು ಆಡಳಿತ

ಹೊನ್ನಾಳಿ : ಹೊರ ರಾಜ್ಯದವರನ್ನು  ವಾಪಸ್ ಕಳಿಸಿದ ತಾಲ್ಲೂಕು ಆಡಳಿತ

ಹೊನ್ನಾಳಿ, ಮೇ 18- ತಾಲ್ಲೂಕಿನ ಅರಕೆರೆ ಚೆಕ್‌ ಪೋಸ್ಟ್‌ನಲ್ಲಿ ಇಂದು ಸಂಜೆ ಆಗಮಿಸಿದ್ದ ಕೆಎ-6 ಡಿ-5136 ಸಂಖ್ಯೆಯ ಖಾಸಗಿ ಬಸ್ಸಿನಲ್ಲಿದ್ದ ತಮಿಳನಾಡು ಮೂಲದ 15 ಜನರನ್ನು  ತಡೆದು ವಾಪಸ್ ಕಳಿಸಿದ ಘಟನೆ ನಡೆದಿದೆ.

ಇದೇ ದಿನಾಂಕ 16 ರಿಂದ 21ರವರೆಗೆ ತಮಿಳುನಾಡಿನಿಂದ ಕೃಷ್ಣಗಿರಿ ಮೂಲಕ ರಾಜಸ್ಥಾನಕ್ಕೆ ತೆರಳುವ 31 ಜನರು ಪಾಸ್‌ ಹೊಂದಿದವರಾಗಿದ್ದು. ಬಸ್‍ನಲ್ಲಿ ಚಾಲಕನನ್ನು ಹೊರತುಪಡಿಸಿ 15 ಜನರು ಮಾತ್ರ ಇದ್ದು, ಅವರು ನ್ಯಾಮತಿ ತಾಲ್ಲೂಕು ಕೆಂಚಿಕೊಪ್ಪದ ವಿದ್ಯುತ್ ಇಲಾಖೆ ಕೆಲಸಕ್ಕಾಗಿ ಬಂದಿದ್ದಾಗಿ ತಿಳಿಸಿದರು.

ತಾಲ್ಲೂಕು ಆಡಳಿತ ಪರಿಶೀಲಿಸಿದಾಗ ಅಂತಹ ಯಾವುದೇ ಕೆಲಸ ಇಲ್ಲದಿರುವುದು ತಿಳಿದುಬಂದಿದೆ. ಜಗಳೂರು ಮಾರ್ಗದಿಂದ ಬಂದಿದ್ದ ಇವರನ್ನು ಅಲ್ಲಿಗೇ ಮರಳುವಂತೆ ಸ್ಥಳದಲ್ಲಿದ್ದ ಸಿಡಿಪಿಓ ಮಹಾಂತಸ್ವಾಮಿ, ಕಂದಾಯಾಧಿಕಾರಿ ದಿನೇಶ್ ಬಾಬು, ವಿಎ ಉಮೇಶ್ ಮತ್ತಿತರರು ಬಸ್ಸನ್ನು ವಾಪಸ್ ಮಲೇಬೆನ್ನೂರು ಮಾರ್ಗದಲ್ಲಿ ಮರಳಿಸಲಾಯಿತು.