ಜನರ ಸೇವೆಗೆ ಸದಾ ಸಿದ್ದ : ಶಿವಗಂಗಾ

ಜನರ ಸೇವೆಗೆ ಸದಾ ಸಿದ್ದ : ಶಿವಗಂಗಾ

ಚನ್ನಗಿರಿ,ಮೇ 16- ಕೋವಿಡ್ -19 ಲಾಕ್‌ಡೌನ್ ಆಗಿರುವುದರಿಂದ ಬಡ ಜನರು ಸಂಕಷ್ಟದಲ್ಲಿದ್ದು, ಇವರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಸದಾ ನಿಮ್ಮ ಸೇವೆಗೆ ಸಿದ್ದ ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ಅಧ್ಯಕ್ಷ ಶಿವಗಂಗಾ ವಿ.ಬಸವರಾಜ್ ತಿಳಿಸಿದರು. ಚನ್ನಗಿರಿ ತಾಲ್ಲೂಕು ಉಪನಾಯಕನಹಳ್ಳಿ ಮತ್ತು ಮೆದಿಕೆರೆ ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿ ಮಾತನಾಡಿದರು. ಯಾವುದೇ ರಾಜಕೀಯ ಉದ್ದೇಶದಿಂದ ಈ ಸೇವೆ ಮಾಡುತ್ತಿಲ್ಲ. ಸ್ವ-ಇಚ್ಛೆಯಿಂದ ನಾನು ದುಡಿದ ದುಡಿಮೆಯಲ್ಲಿ ಅಲ್ಪ ಹಣ ವಿನಿಯೋಗಿಸುತ್ತಿದ್ದೇನೆ ಎಂದು ಹೇಳಿದರು.
ವಿಜಯಕುಮಾರ್ ಮೆದಿಕೆರೆ, ಗಂಗಮ್ಮ ಕರಿಬಸಪ್ಪ, ಬಸವರಾಜ್, ಮಂಜಪ್ಪ, ರಾಜಶೇಖರಪ್ಪ, ಶಿವಕುಮಾರ್, ಕೃಷ್ಣಮೂರ್ತಿ, ರಾಜಪ್ಪ, ಸಂತೇಬೆನ್ನೂರು ಸುರೇಶ್, ತಿಪ್ಪೇರುದ್ರಪ್ಪ, ಶೇಖರಪ್ಪ, ಯಲ್ಲಪ್ಪ, ವೆಂಕಟೇಶ್ ಮತ್ತಿತರರಿದ್ದರು.