ಅಳಿಯದುಳಿದಿಹರು…

ಅಳಿಯದುಳಿದಿಹರು…

ಆಳಾಗಲರಿಯದವರು
ಹಾಳಾಗದುಳಿಯುವರೆ?
ರಾಜಕೀಯವೆಂಬುದೊಂದು
ಪಾಚಿಗಟ್ಟಿರುವ ಹಾಳುಬಾವಿ
ಪುರಾಣೇತಿಹಾಸದೆಲ್ಲಾ ಆಳ್ವಿಕರ
ಹಾಳು ಕನಸುಗಳು ಮುರಿದುಬಿದ್ದಿವೆ ಅಲ್ಲಿ
ಬರೀ ಭೂಪಟವನಳೆದು ಅರಿದು
ಮುರಿದು ರಾಜ್ಯ ಅರಮನೆ ಸೆರೆಮನೆ
ಬಂಗಲೆ ಸೈಟು ಸಮಾಧಿ ಕಟ್ಟಿ ಕುಟ್ಟಿ
ಕೊಂದವರು ಜಗದ
ಮನೋಪಟದಲಿ ಉಳಿಯುವರೇ
ಕೆಲವೇ ಆಳು ಅರಸರು
ಅಳುವವರನರಸಿ ಅರಮನೆ ತೊರೆದು
ಧರೆಯಲಳಿಯದುಳಿದಿಹರು
 ಕಾಣಾ ಕಾವ್ಯಾತ್ಮಾ…


ಶಿವು ಕುರ್ಕಿ
shivukurki1@gmail.com