ಸ್ವರ್ಗದ ದಾರಿ

ಸ್ವರ್ಗದ ದಾರಿ

ಮರಳುಗಾಡಿನಲ್ಲಿ ಸಾಗುತ್ತಿದ್ದ ಇಬ್ಬರು ದಾರಿ ತಪ್ಪಿದರು. ಹಸಿವು ಹಾಗೂ ಬಳಲಿಕೆಯಿಂದ ಅವರು ತತ್ತರಿಸಿದ್ದರು. ಕೊನೆಗೊಮ್ಮೆ ಅವರು ಎತ್ತರದ ಗೋಡೆ ಬಳಿ ಬಂದರು. ಗೋಡೆಯ ಆಚೆಗೆ ನೀರು ಹರಿಯುತ್ತಿರುವ ಶಬ್ದ ಕೇಳಿಸಿತು. ಪಕ್ಷಿಗಳ ಚಿಲಿಪಿಲಿಯೂ ಅಲ್ಲಿತ್ತು. ಎತ್ತರದ ಮರಗಳಲ್ಲಿ ಬಾಯಲ್ಲಿ ನೀರೂರಿಸುವ ಹಣ್ಣುಗಳಿದ್ದವು.

ಓರ್ವ ಯಾತ್ರಿ ಬಹಳ ಕಷ್ಟಪಟ್ಟು ಗೋಡೆಯನ್ನು ಹತ್ತಿ ಆಚೆಗೆ ಹಾರಿದ. ಇನ್ನೋರ್ವ ಮತ್ತೆ ಮರಳುಗಾಡಿನ ಕಡೆಗೆ ಸಾಗಿ, ಮರಳುಗಾಡಿನಲ್ಲಿ ದಾರಿ ತಪ್ಪಿದ ಇತರರಿಗೆ ಓಯಸಿಸ್  ಕಡೆ ದಾರಿ ತೋರಿಸುವ ಕೆಲಸದಲ್ಲಿ ತೊಡಗಿದ.