ಕುಡಿತದಿಂದ ಭಾರತದ ಘನತೆ-ಗೌರವ ಬೀದಿಪಾಲು

ಮಾನ್ಯರೇ,

ದೇಶಕ್ಕೆ ಆದಾಯ ಮುಖ್ಯವಲ್ಲ. ಪ್ರಜೆಗಳ ಆರೋಗ್ಯ ಮುಖ್ಯ ಎಂದರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮದ್ಯಪಾನ ನಿಷೇಧ ಮಾಡಬೇಕು. ಬಡವರು, ಕೂಲಿ ಕಾರ್ಮಿಕರು ದುಡಿದದ್ದನ್ನು ಕುಡಿತಕ್ಕೆ ವ್ಯಯ ಮಾಡಿದರೆ ಸಂಸಾರದ ಗತಿಯೇನು. ಬಾಲ ಕಾರ್ಮಿಕ ಪದ್ಧತಿ ದಿನೇ ದಿನೇ ಹೆಚ್ಚುತ್ತಿದೆ.  ಬಡವರ ಉದ್ಧಾರವಾಗಬೇಕಾದರೆ ಮೊದಲು ಮದ್ಯಪಾನವನ್ನು ನಿಷೇಧಿಸಬೇಕು. ಭಾರತ ಕುಡಿತ, ಜೂಜಿನಿಂದ ಮುಕ್ತವಾಗಬೇಕು. ಸರ್ವಜ್ಞ, ರಾಷ್ಟ್ರಪಿತ ಗಾಂಧೀಜಿ, ಸಮಾಜದ ಮುಖಂಡರು ಕುಡಿತದ ವಿರುದ್ಧ ಹೇಳಿದ್ದಾರೆ. ನಮ್ಮ ಸಮಾಜದ ಮುಖಂಡರು, ಸಾಧು-ಸಂತರು ಕುಡಿತದ ವಿರುದ್ಧ ಆಂದೋಲನ ಸಾರಿದಲ್ಲಿ ಭಾರತದ ಬಡವರ ಉದ್ಧಾರವಾಗಲಿದೆ.

-ಕೆ.ಎನ್. ಸ್ವಾಮಿ, ದಾವಣಗೆರೆ.