ಮೊಲಗಳ ಬೇಟೆ

ಮೊಲಗಳ ಬೇಟೆ

ಮಾರ್ಷಲ್ ಆರ್ಟ್ ವಿದ್ಯಾರ್ಥಿಯೋರ್ವ ಝೆನ್ ಗುರುಗಳ ಬಳಿ ಬಂದ. ಬನಾನು ಮಾರ್ಷಲ್ ಆರ್ಟ್ ಕಲಿಯಬೇಕು. ಇದರ ಜೊತೆಗೆ ನಿಮ್ಮಿಂದಲೂ ಕಲಿಯಬೇಕು. ಅಲ್ಲದೇ ಬೇರೊಬ್ಬ ಗುರುವಿನಿಂದ ಇನ್ನೊಂದು ವಿಧಾನವನ್ನೂ ಕಲಿಯಬೇಕು. ಈ ವಿಚಾರದ ಬಗ್ಗೆ ನೀವೇನು ಹೇಳುತ್ತೀರ? ಎಂದು ಪ್ರಶ್ನಿಸಿದ.

ಆಗ ಗುರು ಹೇಳಿದರು, ಒಂದೇ ಕಾಲಕ್ಕೆ ಎರಡು ಮೊಲಗಳನ್ನು ಬೇಟೆಯಾಡಲು ಹೋಗುವ ಬೇಟೆಗಾರನಿಗೆ ಒಂದು ಮೊಲವೂ ಸಿಗದು.