ಅತ್ಯುನ್ನತ ಸತ್ಯ

ಅತ್ಯುನ್ನತ ಸತ್ಯ

ಚಕ್ರವರ್ತಿಯೋರ್ವ ಬೌದ್ಧ ಅನುಯಾಯಿಯಾಗಿದ್ದ. ಒಮ್ಮೆ ಆತ ಬೌದ್ಧ ಧರ್ಮದ ಕುರಿತು ಅರಿಯಲು ಝೆನ್ ಗುರು ಒಬ್ಬರನ್ನು ತನ್ನ ಅರಮನೆಗೆ ಆಹ್ವಾನಿಸಿದ್ದ.

`ಬೌದ್ಧ ಧರ್ಮದ ಪ್ರಕಾರ ಅತ್ಯುನ್ನತ ಸತ್ಯ ಯಾವುದು` ಎಂದು ಕೇಳಿದ.

ಆಗ ಗುರು, `ಮಹಾ ಶೂನ್ಯ…ಅಲ್ಲಿ ಪಾವಿತ್ರ್ಯತೆಯ ಸೊಲ್ಲೇ ಇಲ್ಲ` ಎಂದರು.

ಚಕ್ರವರ್ತಿ ಕೇಳಿದ, `ಪವಿತ್ರ್ಯತೆಯೇ ಇಲ್ಲ ಎನ್ನುವುದಾದರೆ ನೀವು ಯಾರು, ನೀವು ಏನು` ಎಂದು ಕೇಳಿದ.

ಆಗ ಗುರು ಉತ್ತರಿಸಿದರು, `ನನಗೆ ಗೊತ್ತಿಲ್ಲ`.