ಕೊರೊನಾ ತಡೆ ಜಾಗೃತಿಗಾಗಿ ರಸ್ತೆಯಲ್ಲಿ ಬಣ್ಣದ ಚಿತ್ರ

ಕೊರೊನಾ ತಡೆ ಜಾಗೃತಿಗಾಗಿ ರಸ್ತೆಯಲ್ಲಿ ಬಣ್ಣದ ಚಿತ್ರ

ಹರಿಹರ, ಮಾ.30- ನಗರದ ವಿದ್ಯಾನಗರದ 60 ಅಡಿ ರಸ್ತೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಹೆಚ್ಚಾಗಿ ಹರಡದಂತೆ ತಡೆಗಟ್ಟಲು ರಸ್ತೆಯಲ್ಲಿ ಬಣ್ಣದ ಚಿತ್ರವನ್ನು ರಚಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಬಡಾವಣೆಯ ನಿವಾಸಿಗಳು ತೊಡಗಿದರು. ಈ ಸಂದರ್ಭದಲ್ಲಿ ಚಿತ್ರ ರಚನೆಯನ್ನು ಎಂ.ಕೆ.
ಇ. ಟಿ. ಶಾಲೆಯ ಚಿತ್ರಕಲೆ ಶಿಕ್ಷಕ ರಚಿಸಿದರು. ನಗರಸಭೆ ಪೌರಾಯುಕ್ತೆ ಎಸ್ ಲಕ್ಷ್ಮೀ, ಕ್ರೈಮ್ ಪಿಎಸ್ಐ ಭಾರತಿ ಕಂಕಣವಾಡಿ ನಗರಸಭೆ ಎಇಇ ದಳವಾಯಿ, ನಗರಸಭೆಯ ಸದಸ್ಯೆ ಅಶ್ವಿನಿ ಕೆ.ಜಿ. ಕೃಷ್ಣ, ಮಾಜಿ ನಗರಸಭೆ ಸದಸ್ಯ ನಾಗರಾಜ್ ಮೆಹರ್ವಾಡೆ, ಮುಖಂಡರಾದ ಕೆ.ಜಿ. ಕೃಷ್ಣ, ಎನ್.ಇ. ಸುರೇಶ್, ರಾಜು ಆಟೋ, ರಮೇಶ್, ಗುರು, ಸಂತೋಷ ಇತರರು ಉಪಸ್ಥಿತರಿದ್ದರು.