`ನಂದಿಶ್ರೀ’ ಯಿಂದ ಪತ್ರಕರ್ತರಿಗೆ ಕಿಟ್ ವಿತರಣೆ

`ನಂದಿಶ್ರೀ’ ಯಿಂದ ಪತ್ರಕರ್ತರಿಗೆ ಕಿಟ್ ವಿತರಣೆ

ಹರಿಹರ, ಏ.25- ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಂದಿಶ್ರೀ ಕನ್‌ಸ್ಟ್ರಕ್ಷನ್ಸ್ ಮಾಲೀಕ ಎಂ. ಮಂಜುನಾಥ್ ತಮ್ಮ ಕಾರ್ಯಾಲಯದಲ್ಲಿ ಪತ್ರಕರ್ತರಿಗೆ ಆಹಾರದ ಕಿಟ್‌ ವಿತರಿಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಕಡು-ಬಡುವರನ್ನು ಗುರ್ತಿಸಿ ಈಗಾಗಲೇ ಆಹಾರದ ಕಿಟ್‌ಗಳನ್ನು ವಿತರಿಸುತ್ತಿದ್ದು, ಮುಖ್ಯವಾಗಿ ಅಲೆಮಾರಿ ಜನಾಂಗ, ಕೊಳಚೆ ಪ್ರದೇಶ ಜನಾಂಗಕ್ಕೆ, ಹೋಂಗಾರ್ಡ್ಸ್ ಹಾಗೂ ಇತರೆ ವರ್ಗದವರಿಗೆ ವಿತರಿಸಲಾಗುತ್ತಿದೆ ಎಂದು ಮಂಜುನಾಥ್ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.