ಕೃಷಿ ಪರಿಕರ ಮಾರಾಟಗಾರರಿಂದ ಆಹಾರ ಕಿಟ್ ವಿತರಣೆ

ಕೃಷಿ ಪರಿಕರ ಮಾರಾಟಗಾರರಿಂದ ಆಹಾರ ಕಿಟ್ ವಿತರಣೆ

ಹರಿಹರ, ಏ.24- ತಾಲ್ಲೂಕಿನ ರಸಗೊಬ್ಬರ, ಬೀಜ, ಕೀಟನಾಶಕ, ಕೃಷಿ ಪರಿಕರ ಮಾರಾಟಗಾರರ ಸಂಘದ ವತಿಯಿಂದ ಅನೇಕ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ನೆರವು ನೀಡಲಾಯಿತು.
ಸಂಘದ ವತಿಯಿಂದ ಸಂತ್ರಸ್ತರಿಗೆ ನೂರು ಆಹಾರದ ಕಿಟ್‌ಗಳನ್ನು ನೀಡಲಾಯಿತು. ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ ಅವರಿಗೆ ಕೃಷಿ ಪರಿಕರ ಮಾರಾಟ ಸಂಘದ ಅಧ್ಯಕ್ಷ ಎಂ. ಕರಿಬಸಯ್ಯ ಹಸ್ತಾಂತರಿಸಿದರು.ಇದರೊಂದಿಗೆ ಒಂದು ಲಕ್ಷ ರೂಪಾಯಿ ಡಿ.ಡಿ.ಯನ್ನು ಸಂಘದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಲು ಜಂಟಿ ಕೃಷಿ ನಿರ್ದೇಶಕರಿಗೆ ತಲುಪಿಸಲಾಯಿತು.
ಸಂಘದ ವತಿಯಿಂದ ಕೋವಿಡ್ ಸಂತ್ರಸ್ತರಿಗೆ ಒಟ್ಟು ಎರಡು ಲಕ್ಷ ರೂಪಾಯಿ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ವಿ.ಪಿ. ಗೋವರ್ಧನ್, ಸಂಘದ ಗೌರವಾಧ್ಯಕ್ಷ ಹೆಚ್.ಜಿ. ಚಂದ್ರಶೇಖರ್, ಎಂ.ಜಿ. ಅನಿಲ್ ಕುಮಾರ್, ಎಂ.ಜಿ. ಗಜಾನನ, ಕೆ.ಇ. ವಿಜಯ, ಎಂ.ಆರ್. ಶ್ರೀಧರ ಶೆಟ್ಟಿ, ಕೆಂಪೇಗೌಡ, ಕುಮಾರ, ಬಿ.ಎಂ. ನಾಗರಾಜ್ ಇನ್ನಿತರರಿದ್ದರು.