ಕೋಳಿವಾಡರಿಂದ ವೈದ್ಯರಿಗೆ ರಕ್ಷಾ ಕವಚ ಕೊಡುಗೆ

Home ಚಿತ್ರದಲ್ಲಿ ಸುದ್ದಿ ಕೋಳಿವಾಡರಿಂದ ವೈದ್ಯರಿಗೆ ರಕ್ಷಾ ಕವಚ ಕೊಡುಗೆ

ಕೋಳಿವಾಡರಿಂದ ವೈದ್ಯರಿಗೆ ರಕ್ಷಾ ಕವಚ ಕೊಡುಗೆ

ಕೋಳಿವಾಡರಿಂದ ವೈದ್ಯರಿಗೆ ರಕ್ಷಾ ಕವಚ ಕೊಡುಗೆ

ರಾಣೇಬೆನ್ನೂರು, ಏ. 20- ಮನುಷ್ಯ ಕುಲಕ್ಕೆ ಮಹಾಮಾರಿಯಾಗಿ ಜಗತ್ತಿನ ಜನರಲ್ಲಿ ಜೀವ ಭಯ ಉಂಟು ಮಾಡಿರುವ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಿರುವ ವೈದ್ಯ ಸಮೂಹದ ಸೇವೆ ಅಪಾರವಾದದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಹೇಳಿದರು.

ಸರ್ಕಾರಿ ವೈದ್ಯರಿಗೆ ತಮ್ಮ ಸಾರಥ್ಯದ ಪಿಕೆಕೆ ಸಂಸ್ಥೆಯಿಂದ ಮಾಸ್ಕ್ ಮತ್ತು ದೇಹ ರಕ್ಷಾ ಕವಚನಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ತಮ್ಮ ಕುಟುಂಬ, ಮಕ್ಕಳು, ನೆಂಟರಿಷ್ಟರನ್ನು ದೂರವಿರಿಸಿ, ತಮ್ಮ ಜೀವದ ಹಂಗು ತೊರೆದು ವೈರಸ್ ಹರಡದಂತೆ ಹಗಲಿರುಳು ಸೇವೆ ಮಾಡುತ್ತಿರುವ ವೈದ್ಯರನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದ್ದು, ಆ ದಿಸೆಯಲ್ಲಿ ಎಲ್ಲಾ ವೈದ್ಯರಿಗೆ ಹಾಗೂ ಅವರ ಸಿಬ್ಬಂದಿಗೆ ರಕ್ಷಾ ಕವಚ ನೀಡುತ್ತಿರುವುದಾಗಿ ಪ್ರಕಾಶ ಹೇಳಿದರು.

ಜಿ.ಪಂ. ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸದಸ್ಯರಾದ ಏಕನಾಥ ಭಾನುವಳ್ಳಿ, ಶಿವಾನಂದ ಕನ್ನಪ್ಪಳವರ, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮರ, ತಾ.ಪಂ. ಅಧ್ಯಕ್ಷೆ ಗೀತಾ ಲಮಾಣಿ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ್ ಕಳಸದ, ಸದಸ್ಯರಾದ ಮಂಜನಗೌಡ ಪಾಟೀಲ, ಜಟ್ಟೆಪ್ಪ ಕರೇಗೌಡ್ರ, ಬಸವರಾಜ ಹುಚ್ಚಗೊಂಡರ, ಪ್ರಕಾಶ ಜೈನ್, ಬಸವನಗೌಡ ಮರದ, ಪೊಲೀಸಗೌಡ ವೀರನಗೌಡ್ರ, ವೀರೇಶ ಮೊಟಗಿ ಮತ್ತಿತರರು ಉಪಸ್ಥಿತರಿದ್ದರು.