ಹರಿಹರ‌‌‍‍ ಪೆಟ್ರೋಲ್ ಬಂಕ್ ಮಾಲೀಕರಿಂದ ನಿರಾಶ್ರಿತರಿಗೆ ಕಿಟ್

ಹರಿಹರ‌‌‍‍ ಪೆಟ್ರೋಲ್ ಬಂಕ್ ಮಾಲೀಕರಿಂದ ನಿರಾಶ್ರಿತರಿಗೆ ಕಿಟ್

ಹರಿಹರ, ಏ. 15- ಕೊರೊನಾ ವೈರಸ್ ರೋಗದ ಬಾಧೆ ಹೆಚ್ಚಾಗಿ ಹರಡದಂತೆ ತಡೆಯಲು ಲಾಕ್‌ಡೌನ್ ಮಾಡಿದ್ದರಿಂದ ಬಡ ಕುಟುಂಬದ ಸದಸ್ಯರಿಗೆ ತೊಂದರೆಗಳು ಇರುವುದನ್ನು ಅರಿತುಕೊಂಡು ಪೆಟ್ರೋಲ್ ಬಂಕ್ ಮಾಲೀಕರು ನಿರಾಶ್ರಿತ ಕುಟುಂಬದ ಸದಸ್ಯರಿಗೆ ದಿನಸಿ ಪದಾರ್ಥಗಳ ಕಿಟ್‌ಗಳನ್ನು ತಹಶೀಲ್ದಾರ್ ಕೆ‌.ಬಿ. ರಾಮಚಂದ್ರಪ್ಪನವರ ಮೂಲಕ ತಲುಪಿಸಿದರು. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲೀಕರಾದ ಮಲೇಬೆನ್ನೂರು ಅಣ್ಣಪ್ಪ ಐರಣಿ, ಹೆಚ್. ಶ್ರೀನಿವಾಸ, ಪ್ರಕಾಶ್ ಪೂಜಾರ್, ಹರೀಶ್ ಗೌಡ್ರು, ದೋಸ್ತಾನ್ ಖಲೀಲ್, ಶಶಿಕುಮಾರ್ ಹಾಗು ಇತರರು ಹಾಜರಿದ್ದರು.