ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಸಂಪುಟ ಪುನರ್‌ರಚನೆಯಾಗಲಿದೆ

ಮುಖ್ಯಮಂತ್ರಿ ಬದಲಾವಣೆಯ ವರದಿಗಳ ನಡುವೆಯೇ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಪುಟ ಪುನರ್‌ರಚನೆಯಾಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜಕೀಯ ಕಿತ್ತಾಟಕ್ಕೆ ಜನರಿಂದಲೇ ತಕ್ಕ ಪಾಠ

ರಾಜ್ಯದ ಬಿಜೆಪಿಯಲ್ಲಿ ಬಹಳಷ್ಟು ರಾಜಕೀಯ ಕಿತ್ತಾಟ ನಡೆಯುತ್ತಿದೆ. ರಾಜ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಟ್ಟದಾಗಿ ಆಡಳಿತ ನಡೆಸುತ್ತಿರುವುದು ಸರಿಯಲ್ಲ, ಜನರು ಇದನ್ನು ಸಹಿಸುವುದಿಲ್ಲ, ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ

ವಿಶ್ವಚೇತನ ಕಾಲೇಜಿನ ಸಾಧನೆ

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪದವಿ ಪೂರ್ವ ಕಾಲೇಜು (ಜಿಡಿ0192)ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಆಧಾರದ ಮೇಲೆ  ಉತ್ತಮ ಅಂಕ ಪಡೆದಿದ್ದಾರೆ

ಜಿಲ್ಲೆಯಲ್ಲಿ 20 ಪಾಸಿಟಿವ್, 1 ಸಾವು, 29 ಗುಣಮುಖ

ಜಿಲ್ಲೆಯಲ್ಲಿ ಶುಕ್ರವಾರ 20 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು,  ಒಬ್ಬರು ಮೃತಪಟ್ಟಿದ್ದಾರೆ. 29 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊನ್ನಾಳಿ – ನ್ಯಾಮತಿ ತಾ.ಗಳ ಅಭಿವೃದ್ಧಿಗೆ 25 ಕೋಟಿ ಮಂಜೂರು

ನ್ಯೂಜೆರ್ಸಿ ಕ್ರ್ಯಾಷ್ ಬ್ಯಾರಿಯರ್‍ಗಳನ್ನು ಅಳವಡಿಸುವ ಕಾಮಗಾರಿಗಳಿಗೆ 25 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಮೊತ್ತದ ಕಾಮಗಾರಿಗೆ ಜು. 22 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ

ಬೀದಿ ಬದಿ ವಾಪಾರಸ್ಥರು ಸುಂಕ ನೀಡದಂತೆ ಪಾಲಿಕೆ ಸೂಚನೆ

ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಸ್ಥಳಗಳಲ್ಲಿ ನಿತ್ಯ ಹಾಗೂ ವಾರದ ಸಂತೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿ ಮಾಡಲು ನೀಡಿದ ಕಾರ್ಯಾದೇಶದ ಅವಧಿ ಮುಕ್ತಾಯವಾಗಿದ್ದು, ಮುಂದಿನ ಹರಾಜು ಪ್ರಕ್ರಿಯೆ ನಡೆಸಿ, ಕಾರ್ಯಾದೇಶ ನೀಡುವವರೆಗೂ ಬೀದಿ ಬದಿ ವ್ಯಾಪಾರಿಗಳು ಸುಂಕ ನೀಡದಂತೆ ಸೂಚನೆ ನೀಡಲಾಗಿದೆ.

ಪ್ಯಾಕೇಜ್ ಟೆಂಡರ್ ರದ್ದುಪಡಿಸುವಂತೆ ಸ್ಥಳೀಯ ಗುತ್ತಿಗೆದಾರರ ಒತ್ತಾಯ

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ಕರೆದಿರುವ ಪ್ಯಾಕೇಜ್ ಟೆಂಡರ್ ರದ್ದುಪಡಿಸುವಂತೆ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಸಿದ್ಧರಾಮಪ್ಪ ಒತ್ತಾಯಿಸಿದ್ದಾರೆ.

ಕೆ.ಎಸ್. ಈಶ್ವರಪ್ಪಗೆ ಮುಖ್ಯಮಂತ್ರಿ ಸ್ಥಾನಕ್ಕೆ ಒತ್ತಾಯ

ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸುವುದಾದರೆ ಹಿಂದುಳಿದ ವರ್ಗದ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡುವಂತೆ ಜಿಲ್ಲಾ ಹಾಲುಮತ ಮಹಾಸಭಾ ಒತ್ತಾಯಿಸಿದೆ.

ಅಂಗನವಾಡಿ ಸಹಾಯಕಿ ಹುದ್ದೆ ನೇಮಕಾತಿಯಲ್ಲಿ ಎಸ್ಸಿ ಮಹಿಳೆಗೆ ಅನ್ಯಾಯ

ಹರಿಹರ ತಾಲ್ಲೂಕು ಹನಗವಾಡಿ ಗ್ರಾಮ ಪಂಚಾ ಯತಿ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರವನ್ನು ಪರಿಶಿಷ್ಟ ಜಾತಿ ಮೀಸಲಾತಿ ಬದಲಾಯಿಸಿ, ಸಾಮಾನ್ಯ ಮೀಸಲಾತಿ ಮಾಡುವ ಮೂಲಕ ಅನ್ಯಾಯ ಮಾಡ ಲಾಗಿದೆ

ಅಸಂಘಟಿತ ಕಾರ್ಮಿಕರಿಗೆ ನೆರವು

ಕ್‌ಡೌನ್‌ ಪರಿಣಾಮ ಆರ್ಥಿಕ ನಷ್ಟ ಅನುಭವಿಸಿದ ಅಸಂಘಟಿತ ಕಾರ್ಮಿಕ ವರ್ಗದವರಿಗೆ 2 ಸಾವಿರ ರೂ.ಗಳ ಒಂದು ಬಾರಿಯ ನೆರವಿನ ಪ್ಯಾಕೇಜ್‌ ಘೋಷಿಸಲಾಗಿದೆ. 

ಪಿಯು ಪರಿಕ್ಷೆಯಲ್ಲಿ ಸೈನ್ಸ್‍ ಅಕಾಡೆಮಿ ಸಾಧನೆ

2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ಸೈನ್ಸ್‌ ಅಕಾಡೆಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಸ್‌.ಎಸ್.ಎಲ್‌.ಸಿ ಮತ್ತು ಪ್ರಥಮ ಪಿಯುಸಿ ಆಧಾರದ ಮೇಲೆ  ಉತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.

27 ಪಾಸಿಟಿವ್, 28 ಗುಣ

ಜಿಲ್ಲೆಯಲ್ಲಿ ಗುರುವಾರ 27 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು,  28 ಜನರು ಗುಣಮುಖರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಂ.ಬಿ. ಅಯ್ಯನಹಳ್ಳಿ : ಚಿರತೆ ದಾಳಿ

ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದು ಅವೈಜ್ಞಾನಿಕ ಹಾಗೂ ಅವಾಸ್ತವ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್‌ ಆರ್ಗನೈಸೇಷನ್ ವಿರೋಧ ವ್ಯಕ್ತಪಡಿಸಿದೆ.

ನಿಜಲಿಂಗಪ್ಪ ಲೇಔಟ್‌ ಪಾರ್ಕ್‌ನ ಸುತ್ತ ಹೊಂಗೆ ಗಿಡ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ವತಿಯಿಂದ  ನಗರದ ಎಸ್. ನಿಜಲಿಂಗಪ್ಪ ಬಡಾ ವಣೆಯ ಶ್ರೀಮತಿ ಗಂಗೂಬಾಯಿ ಹಾನಗಲ್ ಉದ್ಯಾನವನದ ಸುತ್ತ ಮುತ್ತ ಹೊಂಗೆ ಗಿಡಗಳನ್ನು ನೆಡಲಾ ಯಿತು.

ರಾಣೇಬೆನ್ನೂರಿನ ರೋಟರಿ ವಿದ್ಯಾಲಯದ ಪಿಯು ಫಲಿತಾಂಶ

ರಾಣೇಬೆನ್ನೂರು : ರೋಟರಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು , 20 ವಿಶಿಷ್ಟ ದರ್ಜೆ, 52 ಪ್ರಥಮ 7 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ದರೋಡೆ : ಮೂವರ ಬಂಧನ

ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಸ್ಥಳೀಯ ಗ್ರಾಮಾಂತರ ಪೊಲೀಸರು, ಮೊಬೈಲ್ ಫೋನ್, 3,550 ರೂ. ನಗದು, ಒಂದು ಬೈಕ್‍  ವಶಪಡಿಸಿಕೊಂಡಿದ್ದಾರೆ.

13 ಪಾಸಿಟಿವ್, 23 ಗುಣಮುಖ

ಜಿಲ್ಲೆ ಯಲ್ಲಿ ಮಂಗಳವಾರ 13 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 23 ಜನರು ಗುಣಮುಖ ರಾಗಿದ್ದಾರೆಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ

ಚನ್ನಗಿರಿ : ಯಡಿಯೂರಪ್ಪ ಅವರನ್ನೇ ಮುಂದಿನ 2 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಇಲ್ಲದಿದ್ದರೆ ಬಿಜೆಪಿಗೆ ಉಳಿಗಾಲ ಇಲ್ಲ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ವೀರಶೈವ ಸಮುದಾಯವೂ ಅವಕಾಶ ನೀಡುವುದಿಲ್ಲ

ದ್ವಿತೀಯ ಪಿಯು ಫಲಿತಾಂಶ : ಸಿದ್ಧಗಂಗಾ ಶಾಲೆ ವಿದ್ಯಾರ್ಥಿಗಳ ಸಾಧನೆ

2020-21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ನಗರದ ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. 

15-20 ದಿನಗಳಲ್ಲಿ ಭರಮಸಾಗರ ದೊಡ್ಡ ಕೆರೆಗೆ ಭದ್ರಾ ನೀರು: ಶಾಸಕ ಎಂ. ಚಂದ್ರಪ್ಪ

ಭರಮಸಾಗರ : ಜನಪ್ರಿಯ ಪಾಳೆಗಾರ ಮದಕರಿನಾಯಕ ವಂಶದ ಭರಮಣ್ಣ ನಾಯಕ ನಿರ್ಮಿಸಿದ ಐತಿಹಾಸಿಕ ಭರಮಸಾಗರ ದೊಡ್ಡಕೆರೆಗೆ ಇನ್ನೇನು ಕೇವಲ 20-25 ದಿನಗಳ ಅಂತರದಲ್ಲಿ ಭದ್ರಾ ನೀರು ಹರಿದು ಬರಲಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.

ಬಿಎಸ್‌ವೈ ಹಿಂದೆ ಸರಿದರೆ ಬಿಜೆಪಿಗೆ ತೊಂದರೆ

ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಎಲ್ಲ ಸಮುದಾಯದ ಜನರು ಬೆಂಬಲಿಸಿ ದ್ದಾರೆ. ಅವರನ್ನು ಹಿಂದೆ ಸರಿಯುವಂತೆ ಮಾಡಿದರೆ ಬಿಜೆಪಿಗೆ ತೊಂದರೆಯಾಗುವ ಎಲ್ಲ ಸಾಧ್ಯತೆಗಳಿವೆ.

ಪ್ರಮಾಣ ಪತ್ರ ಸಲ್ಲಿಸಲು ಕಲಾವಿದರು, ಸಾಹಿತಿಗಳಿಗೆ ಸೂಚನೆ

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಸಾಶನ ಪಡೆಯುತ್ತಿರುವ ಸಾಹಿತಿ ಹಾಗೂ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಸಹಿ ಪಡೆದು ಇದೇ ದಿನಾಂಕ 25 ರೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಹಳೇ ಭಾಗದ ಪ್ರಮುಖ ರಸ್ತೆಗಳಲ್ಲಿ ಭಾರೀ ವಾಹನ ನಿಷೇಧಿಸಲು ಚಿಂತನೆ

ಹಳೇ ದಾವಣಗೆರೆ ಭಾಗದ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಪ್ರಮುಖ 6 ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶ ನಿಷೇಧಿತ ರಸ್ತೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಅವರ ಅಧ್ಯಕ್ಷತೆಯಲ್ಲಿ ನಗರದ ಶ್ರೀ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಪೂರ್ವಭಾವಿ ಸಭೆ ನಡೆಸಲಾಯಿತು.