ಸುದ್ದಿಗಳು

Home ಸುದ್ದಿಗಳು
ಪೌಷ್ಠಿಕ ಆಹಾರಕ್ಕೆ ನಿರಂತರ ಅಭಿಯಾನ

ಪೌಷ್ಠಿಕ ಆಹಾರಕ್ಕೆ ನಿರಂತರ ಅಭಿಯಾನ

ಆರೋಗ್ಯಕರ ಜೀವನಕ್ಕಾಗಿ ಪೌಷ್ಠಿಕ ಆಹಾರ ಅತ್ಯಗತ್ಯ. ರಸಗೊಬ್ಬರ ಹಾಗೂ ರಾಸಾಯನಿಕಗಳ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೌಷ್ಠಿಕ ಬೆಳೆ ಮತ್ತು ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳ ಲೇಬೇಕಾಗಿದೆ ಎಂದು ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಹೇಳಿದ್ದಾರೆ.

400 ಜನರಿಗೆ ಕೋವಿಡ್ ಲಸಿಕೆ

400 ಜನರಿಗೆ ಕೋವಿಡ್ ಲಸಿಕೆ

ಕೊರೊನಾ ಲಸಿಕೆ ಹಾಕಿಸುವ ಮುಖೇನ ಅವರುಗಳ ಆರೋಗ್ಯದ ಕಾಳಜಿಯನ್ನು 24ನೇ ವಾರ್ಡಿನ ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್ ಮೆರೆದಿದ್ದಾರೆ.

ಮಾಯಕೊಂಡದಲ್ಲಿ ಮಕ್ಕಳಿಗೆ ಸ್ಪರ್ಧೆ

ಮಾಯಕೊಂಡದಲ್ಲಿ ಮಕ್ಕಳಿಗೆ ಸ್ಪರ್ಧೆ

ಮಾಯಕೊಂಡದ ಶ್ರೀ ಕಾಶಿ ವಿಶ್ವನಾಥೇಶ್ವರ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ 2ನೇ ಶ್ರಾವಣ ಸೋಮವಾರದಂದು 100 ಮೀ. ಓಟ ಮತ್ತು ಚಿತ್ರ ಬಿಡಿಸುವ ಸ್ಪರ್ಧೆಯನ್ನು ಯು.ಕೆ.ಜಿ. ಮಕ್ಕಳಿಗೆ ನಡೆಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರಿಂದ ಚಲೋ

ಅಂಗನವಾಡಿ ಕಾರ್ಯಕರ್ತೆಯರಿಂದ ಚಲೋ

ಅಂಗನವಾಡಿ ಕಾರ್ಯಕರ್ತೆ ಯರ ಮತ್ತು ಸಹಾಯಕಿಯರ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ನಾಳೆ ದಿನಾಂಕ 25ರಂದು ವಿಧಾನ ಸೌಧ ಚಲೋ ಮೂಲಕ ಅನಿರ್ದಿಷ್ಟಾವಧಿಯ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ.

ರಾಜ್ಯಪಾಲರೊಂದಿಗೆ ಚರ್ಚೆ

ರಾಜ್ಯಪಾಲರೊಂದಿಗೆ ಚರ್ಚೆ

ಸಿಂಡಿಕೇಟ್ ಬ್ಯಾಂಕ್ ಮಾಜಿ ನಿರ್ದೇಶಕ ನಸೀರ್ ಅಹ್ಮದ್ ರಾಜ್ಯಪಾಲ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನೀಡುತ್ತಿರುವ ಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿಗಳಿಗೆ ಆಗುತ್ತಿರುವ  ತೊಂದರೆಗಳು, ಇನ್ನಿತರೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.  

ಕುಂದು – ಕೊರತೆಗಳನ್ನು ನೀಗಿಸದ ಗ್ರಾ.ಪಂ. ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕುಂದು – ಕೊರತೆಗಳನ್ನು ನೀಗಿಸದ ಗ್ರಾ.ಪಂ. ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಹೆಬ್ಬಾಳು ಗ್ರಾಮ ಪಂಚಾಯ್ತಿಗೆ ಸೇರಿದ ನೀರ್ಥಡಿ ಗ್ರಾಮದಲ್ಲಿರುವ ಕುಂದು - ಕೊರತೆಗಳನ್ನು ನೀಗಿಸದೇ ಜನರಿಗೆ ತೊಂದರೆ ಮಾಡುತ್ತಿರುವ ಬಿಲ್ ಕಲೆಕ್ಟರ್, ಕಾರ್ಯದರ್ಶಿ ಇತರೆ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದರು.

ಮೆಕ್ಕೆಜೋಳ, ತೊಗರಿ ಪ್ರಾತ್ಯಕ್ಷಿಕೆ

ಮೆಕ್ಕೆಜೋಳ, ತೊಗರಿ ಪ್ರಾತ್ಯಕ್ಷಿಕೆ

ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಿಂದ ತಾಲ್ಲೂಕಿನ ಅಗಸನಕಟ್ಟೆ ಗ್ರಾಮದಲ್ಲಿ ಮೆಕ್ಕೆಜೋಳ, ತೊಗರಿ ಮುಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. 

ಚಿನ್ನ-ಬೆಳ್ಳಿ ಅಂಗಡಿಗಳು ಬಂದ್

ಚಿನ್ನ-ಬೆಳ್ಳಿ ಅಂಗಡಿಗಳು ಬಂದ್

ಕೇಂದ್ರ ಸರ್ಕಾರವು ಒಡವೆಗಳ ಮೇಲೆ ಹೆಚ್‌ಯುಐಡಿ ಕಡ್ಡಾಯಗೊಳಿಸಿ ರುವುದನ್ನು ವಿರೋಧಿಸಿ ನಗರದಲ್ಲಿಂದು ದಿ ದಾವಣಗೆರೆ ಜ್ಯುಯಲರ್ಸ್  ಅಸೋಸಿಯೇಷನ್‌ ನೇತೃತ್ವದಲ್ಲಿ ಚಿನ್ನ-ಬೆಳ್ಳಿ ಅಂಗಡಿಗಳನ್ನು ಬಂದ್  ಮಾಡಿ   ಸರ್ಕಾರದ ಗಮನ ಸೆಳೆಯಲಾಯಿತು.

ಬಾಯಿ ರೋಗಶಾಸ್ತ್ರ ಶೃಂಗ ಸಭೆಗೆ ಬಾಪೂಜಿ ದಂತ ವ್ಯದ್ಯ ವಿದ್ಯಾರ್ಥಿಗಳು

ಬಾಯಿ ರೋಗಶಾಸ್ತ್ರ ಶೃಂಗ ಸಭೆಗೆ ಬಾಪೂಜಿ ದಂತ ವ್ಯದ್ಯ ವಿದ್ಯಾರ್ಥಿಗಳು

2021 ರ ಏಪ್ರಿಲ್‌ನಲ್ಲಿ ಎಸ್‌.ಆರ್‌.ಎಂ. ಕೆಟ್ಟಿಂಕುಳತ್ತೂರು ದಂತ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಬಾಯಿ ರೋಗಶಾಸ್ತ್ರ ಶೃಂಗಸಭೆಯಲ್ಲಿ ನಗರದ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು ಬಹುಮಾನ ಗಳಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ವೀರಶೈವ ಮಹಾಸಭಾದಿಂದ ಅಭಿನಂದನೆ

ಮುಖ್ಯಮಂತ್ರಿಗಳಿಗೆ ವೀರಶೈವ ಮಹಾಸಭಾದಿಂದ ಅಭಿನಂದನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ|| ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಇಂದು ಅಭಿನಂದಿಸಲಾಯಿತು.

ಆರ್‌.ಜಿ. ವಿದ್ಯಾಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ

ಆರ್‌.ಜಿ. ವಿದ್ಯಾಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ

ಸ್ಥಳೀಯ ಆರ್.ಜಿ. ವಿದ್ಯಾಸಂಸ್ಥೆಯ ಕಾಲೇಜು ಕಟ್ಟಡವನ್ನು ಸಿದ್ದವೀರಪ್ಪ ಬಡಾವಣೆಯ ಬಿಐಇಟಿ ಕಾಲೇಜು ರಸ್ತೆಯಲ್ಲಿ ಆರಂಭಿಸ ಲಾಗಿದ್ದು, ಸರಳ ಪೂಜಾ ಕಾರ್ಯಕ್ರಮದೊಂದಿಗೆ ನಿನ್ನೆ ಕಾರ್ಯಾರಂಭ ಮಾಡಿತು.

ನೀರು ಆಹಾರವಿಲ್ಲದೆ ಜೀವಿಸಬಹುದು, ಆಮ್ಲಜನಕವಿಲ್ಲದೆ ಬದುಕಲು ಸಾಧ್ಯವಿಲ್ಲ

ನೀರು ಆಹಾರವಿಲ್ಲದೆ ಜೀವಿಸಬಹುದು, ಆಮ್ಲಜನಕವಿಲ್ಲದೆ ಬದುಕಲು ಸಾಧ್ಯವಿಲ್ಲ

ನಗರದ ಎವಿಕೆ ಕಾಲೇಜಿನಲ್ಲಿ ಇಕೋ ಕ್ಲಬ್ ಕಾರ್ಯಕ್ರಮದ ಅಡಿಯಲ್ಲಿ `ಉಸಿರಿಗಾಗಿ ಹಸಿರು', `ಹಸಿರು ನಾಶಮಾಡಿರುವ ತಪ್ಪಿಗೆ ಗಿಡನೆಟ್ಟು ಬೆಳೆಸಿ' ಆಶಯದೊಂದಿಗೆ ಸಸಿ ನಡುವ ಕಾರ್ಯಕ್ರಮ ನಡೆಸಲಾಯಿತು.