ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಕನ್ನಡ ಬೆಳೆಸಿ

ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಕನ್ನಡ ಬೆಳೆಸಿ

ಹರಪನಹಳ್ಳಿ : ಪ್ರಾಥಮಿಕ ಹಂತದಿಂದ  ಉನ್ನತ ಶಿಕ್ಷಣದವರೆಗೆ ಕನ್ನಡ ಭಾಷೆಯನ್ನು ಬೆಳೆಸಬೇಕು. ಕನ್ನಡ ಕೇವಲ ಸಂಗೀತ, ಸಾಂಸ್ಕೃತಿಕ ಹಾಗೂ ಸಮ್ಮೇಳನ ದಂತಹ ಕಾರ್ಯಕ್ರಮಗಳಿಗೆ ಸೀಮಿತವಾಗ ಬಾರದು ಎಂದು ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್ ಹೇಳಿದರು.

ಸೋರುತಿಹವು ಮಾನವೀಯ ಸಂಬಂಧಗಳು : ಬಸವಪ್ರಭು ಶ್ರೀ

ಸೋರುತಿಹವು ಮಾನವೀಯ ಸಂಬಂಧಗಳು : ಬಸವಪ್ರಭು ಶ್ರೀ

ಹಿಂದೆ ಗುಡಿಸಲು, ಹಂಚಿನ ಹಾಗೂ ಮಾಳಿಗೆ ಮನೆಗಳಿದ್ದು, ಮಳೆ ಬಂದರೆ ಸೋರುತ್ತಿದ್ದವು. ಅಲ್ಲಿ ಸಂಬಂಧ ಕಲ್ಲಿನಂತೆ ಗಟ್ಟಿಯಾಗಿರುತ್ತಿದ್ದವು. ಆದರೀಗ ಸಿಮೆಂಟ್ ಮನೆಗಳು ನಿರ್ಮಾಣವಾಗಿವೆ. ಮನೆ ಸೋರುವ ಬದಲು ಸಂಬಂಧಗಳು ಸೋರುತ್ತಿವೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಉತ್ತಮ ಬದುಕಿಗೆ ಸಂಸ್ಕಾರ ಮುಖ್ಯ

ಉತ್ತಮ ಬದುಕಿಗೆ ಸಂಸ್ಕಾರ ಮುಖ್ಯ

ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ  ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ ಖಂಡಿಸಿ ಪ್ರತಿಭಟನೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮ ಖಂಡಿಸಿ ಪ್ರತಿಭಟನೆ

ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ  ಅಕ್ರಮಗಳು ನಡೆಯುತ್ತಿರುವುದು ವಿಪರ್ಯಾಸ ಮತ್ತು ಇದನ್ನು ಅಭಾವಿಪ ಅತಿ ಕಟುವಾಗಿ ಖಂಡಿಸಿದೆ.

ತ್ವರಿತಗತಿಯಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ಕೈಗೊಳ್ಳದಿದ್ದರೆ ಕ್ರಮ

ತ್ವರಿತಗತಿಯಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ಕೈಗೊಳ್ಳದಿದ್ದರೆ ಕ್ರಮ

ನ್ಯಾಮತಿ : ಪಟ್ಟಣದ ಕುಂಬಾರ ಬೀದಿ ರಸ್ತೆ ಹಾಗೂ ಆಂಜನೇಯ ದೇವಸ್ಥಾನದ ರಸ್ತೆ ಅಗಲೀಕರಣ ಕಾಮಗಾರಿಗಳ ವೇಗವನ್ನು ಹೆಚ್ಚಿಸದೇ ಇದ್ದರೆ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ರಾಜ ಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಚುನಾವಣೆ : 28-37ನೇ ವಾರ್ಡ್ ಕಾಂಗ್ರೆಸ್ ಸಭೆ

ಚುನಾವಣೆ : 28-37ನೇ ವಾರ್ಡ್ ಕಾಂಗ್ರೆಸ್ ಸಭೆ

ಮಹಾನಗರ ಪಾಲಿಕೆಯ 28 ಮತ್ತು 37ನೇ ವಾರ್ಡ್‍ಗಳಿಗೆ ಇದೇ ದಿನಾಂಕ 20ರಂದು ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ಸಂಜೆ ಆಕಾಂಕ್ಷಿಗಳು, ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಯಿತು.

ಜಿಲ್ಲೆಯ ಗ್ರಾಮ ಪಂಚಾಯ್ತಿಗಳಿಗೆ 20 ರಂದು ಉಪ ಚುನಾವಣೆ

ಚನ್ನಗಿರಿ, ದಾವಣಗೆರೆ, ಜಗಳೂರು, ಹರಿಹರ ಹಾಗೂ ನ್ಯಾಮತಿ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹಾಗೂ ತೆರವಾಗಿರುವ ಸದಸ್ಯರ ಸ್ಥಾನಗಳಿಗೆ ಇದೇ ದಿನಾಂಕ 20ರಂದು ಉಪಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ರಸಗೊಬ್ಬರ ಕೊರತೆ ಆಗದಂತೆ ಎಚ್ಚರ ವಹಿಸಲು ಸೂಚನೆ

ಹೊನ್ನಾಳಿ : ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಕೊರತೆ ಆಗದಂತೆ ಎಚ್ಚರ ವಹಿಸಬೇಕೆಂದು ಕೃಷಿ ನಿರ್ದೇಶಕರಾದ ಶ್ರೀಮತಿ ನಂದಿನಿ ಸೂಚಿಸಿದರು. ತಾಲ್ಲೂಕು ಪಂಚಾಯತಿಯ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಲಾಗಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬಸವಾದಿ ಶಿವಶರಣರ ಅಧ್ಯಯನ ಅಗತ್ಯ

ಬಸವಾದಿ ಶಿವಶರಣರ ಅಧ್ಯಯನ ಅಗತ್ಯ

ಹಿಂದಿನ ದಿನಗಳಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಖ್ಯಾತಿ ಯಾಗಿದ್ದ ದಾವಣಗೆರೆ ನಗರ ಕ್ರಮೇಣವಾಗಿ ಶಿಕ್ಷಣ ನಗರಿಯಾಗಿ, ತದನಂತರ ಬೆಣ್ಣೆನಗರಿ ಎಂದು ಕರೆಯಲ್ಪಡಪಡುವಂತಾಯಿತು. ದಾವಣಗೆರೆಯನ್ನು `ಸಾಂಸ್ಕೃತಿಕ ನಗರಿ' ಎಂದು ಶಾಶ್ವತವಾಗಿ ಉಳಿಸಿಕೊಳ್ಳುವಂತಾಗ ಬೇಕು.

ಬಸವಣ್ಣನವರ ಚಿಂತನಗಳು ಸಾರ್ವಕಾಲಿಕ ಪ್ರಸ್ತುತ

ಬಸವಣ್ಣನವರ ಚಿಂತನಗಳು ಸಾರ್ವಕಾಲಿಕ ಪ್ರಸ್ತುತ

ಬೆಂಗಳೂರು : ಇಲ್ಲಿನ ತರಳಬಾಳು ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಸವಣ್ಣನವರ ಷಟ್ ಸ್ಥಲ ವಚನಗಳ ಹಿಂದಿ ಭಾಷಾ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. 

ರೈತರಿಂದಲೇ ರಾಗಿ ಖರೀದಿಸುವಂತೆ ಸೂಚನೆ

ರೈತರಿಂದಲೇ ರಾಗಿ ಖರೀದಿಸುವಂತೆ ಸೂಚನೆ

ಬೆಂಬಲ ಬೆಲೆಯಲ್ಲಿ ಸರ್ಕಾರದಿಂದ ರಾಗಿ ಖರೀದಿಸುತ್ತಿದ್ದು ನೈಜ ರೈತರಿಂದ ರಾಗಿ ಖರೀದಿಸಿ ದಲ್ಲಾಳಿಗಳು, ಮಧ್ಯವರ್ತಿಗಳು, ವ್ಯಾಪಾರಸ್ಥರನ್ನು ದೂರವಿಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾ ಶಂಕರ್ ಹೇಳಿದರು.

ಅಜ್ಞಾನಿಗಳ ಸಹವಾಸದಿಂದಾಗಿ ಹಾಲುಮತ ಪರಂಪರೆಗೆ ಧಕ್ಕೆ

ಅಜ್ಞಾನಿಗಳ ಸಹವಾಸದಿಂದಾಗಿ ಹಾಲುಮತ ಪರಂಪರೆಗೆ ಧಕ್ಕೆ

ಮಲೇಬೆನ್ನೂರು : ಅಜ್ಞಾನಿಗಳ ಸಹವಾಸದಿಂದಾಗಿ ಪರಂಪರೆಯುಳ್ಳ ಹಾಲುಮತ ಸಮಾಜದ ಸಂಸ್ಕೃತಿಗೆ ದಕ್ಕೆ ಉಂಟಾಗುತ್ತದೆ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಮ್ಮಾಪುರ ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ

ಜಮ್ಮಾಪುರ ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ

ಜಗಳೂರು : ತಾಲ್ಲೂಕಿನ ಜಮ್ಮಾಪುರ  ಸಮೀಪದ ಗುಡ್ಡದಲ್ಲಿ ರಾತ್ರಿ ಅಕ್ರಮ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಮ್ಯಾಂಗನೀಸ್ ಅದಿರನ್ನು ಬೇರೆಡೆ ಸಾಗಣೆ ಮಾಡಲಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಣ ಕುರುಡಾಗಿದ್ದಾರೆ.

ದಾರ್ಶನಿಕರ ಜಯಂತಿ ಆಚರಣೆಗೆ ಸೀಮಿತ

ದಾರ್ಶನಿಕರ ಜಯಂತಿ ಆಚರಣೆಗೆ ಸೀಮಿತ

ಹರಿಹರ : ನಾಡಿನಾದ್ಯಂತ ಆಚರಣೆ ಮಾಡು ತ್ತಿರುವ ದಾರ್ಶನಿಕರ ಜಯಂತಿ ಗಳು ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತ ವಾಗಿವೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಹರಿಹರಕ್ಕೆ ಜಲಧಾರೆ ರಥ

ಹರಿಹರಕ್ಕೆ ಜಲಧಾರೆ ರಥ

ಜಾತ್ಯತೀತ ಜನತಾದಳದ ವತಿಯಿಂದ ರಾಜ್ಯದ ಸಮಗ್ರ ನೀರಾವರಿಗಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಜನತಾ ಜಲಧಾರೆ ರಥವು ನಗರಕ್ಕೆ ಆಗಮಿಸಿದ್ದು, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಅವರು ಗುತ್ತೂರು ಬಳಿಯ ಶ್ರೀ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥಕ್ಕೆ ಹೂವಿನ ಹಾರವನ್ನು ಹಾಕುವ ಮೂಲಕ ಬರಮಾಡಿಕೊಂಡರು.

ರೌಡಿ ಚಟುವಟಿಕೆಗಳಿಗೆ ಆಸ್ಪದ ನೀಡಲ್ಲ

ಸ್ಥಳೀಯರನ್ನು ಹೆದರಿಸಿ ಹಣ ಮಾಡುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಅಂತಹವರ ವಿರುದ್ಧ ದೂರು ನೀಡದ ಹಿನ್ನೆಲೆಯಲ್ಲಿ ಇಲಾಖೆಯೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಯಾರಾದರೂ ದೂರು ನೀಡಿದರೆ, ರೌಡಿಗಳನ್ನು ಹಿಡಿದು ಜೈಲಿಗೆ ಕಳಿಸಲಾಗುವುದು

ಮನುಕುಲದ ಓರೆ-ಕೋರೆಗಳನ್ನು ತಿದ್ದುವ ಪ್ರಬಲ ಮಾಧ್ಯಮ ನಾಟಕ : ಹೆಬ್ಬಾಳು ಶ್ರೀ

ಮನುಕುಲದ ಓರೆ-ಕೋರೆಗಳನ್ನು ತಿದ್ದುವ ಪ್ರಬಲ ಮಾಧ್ಯಮ ನಾಟಕ : ಹೆಬ್ಬಾಳು ಶ್ರೀ

ನಾಟಕ ಪರಂಪರೆಗೆ  ಸಾವಿರಾರು ವರ್ಷಗಳ ಇತಿಹಾಸ ವಿದೆ. ಮನುಕುಲದ ಓರೆ-ಕೋರೆಗಳನ್ನು ನೇರವಾಗಿ ತಿದ್ದುವಂತಹ ಪ್ರಬಲ ಮಾಧ್ಯಮ `ನಾಟಕ' ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

ಮಲೇಬೆನ್ನೂರು: ನಾಮಫಲಕ ಉದ್ಘಾಟನೆ

ಮಲೇಬೆನ್ನೂರು: ನಾಮಫಲಕ ಉದ್ಘಾಟನೆ

ಮಲೇಬೆನ್ನೂರು : ಲಯನ್ಸ್ ಜಿಲ್ಲೆ - 317 ಸಿ ವ್ಯಾಪ್ತಿಯ 19ನೇ  ಲಯನ್ಸ್ ಸಮ್ಮೇಳವು ನಾಡಿದ್ದು ದಿನಾಂಕ 30 ಮತ್ತು ಮೇ 1ರಂದು ಉಡುಪಿಯಲ್ಲಿ ಜರುಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ವಿಶ್ವನಾಥ್ ಶೆಟ್ಟಿ ತಿಳಿಸಿದರು.

ದೊಡ್ಡ, ಸಣ್ಣ ರೈತ ಎನ್ನದೇ ಬೇಡಿಕೆ ಈಡೇರಿಸಲು ಮುಂದಾಗಿ

ದೊಡ್ಡ, ಸಣ್ಣ ರೈತ ಎನ್ನದೇ ಬೇಡಿಕೆ ಈಡೇರಿಸಲು ಮುಂದಾಗಿ

ರಾಣೇಬೆನ್ನೂರು : ದೊಡ್ಡ, ಸಣ್ಣ ರೈತ ಎನ್ನುವ ತಾರತಮ್ಯವಾಗಲೀ,  ಮುಂಗಾರು, ಹಿಂಗಾರು ಎಂದು ಬೆಳೆಗಳ ವಿಂಗಡನೆ ಬೇಡ, ಎಲ್ಲೆಡೆ ಎಲ್ಲರದ್ದು ಸಮನಾದ ಶ್ರಮ ಇರುತ್ತೆ. ಎಲ್ಲ ರೈತರನ್ನೂ ಸರ್ಕಾರ ಸಮನಾಗಿ ಕಾಣಬೇಕು.

ತುಂಗಭದ್ರಾ ನದಿಯಲ್ಲಿ ವಿಪತ್ತು ನಿರ್ವಹಣಾ ತಂಡದಿಂದ ಅಣಕು ಪ್ರದರ್ಶನ

ತುಂಗಭದ್ರಾ ನದಿಯಲ್ಲಿ ವಿಪತ್ತು ನಿರ್ವಹಣಾ ತಂಡದಿಂದ ಅಣಕು ಪ್ರದರ್ಶನ

ಹರಿಹರ : ನದಿಯಲ್ಲಿ ಅವಘಡ ನಡೆದರೆ ಆತ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ತಿಳಿದುಕೊಂಡು ಈಜುವುದು ಒಳ್ಳೆಯದು ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಅವರು ತಿಳಿಸಿದರು.

ಪುರೋಹಿತರು, ದೇವರ ಮತ್ತು ಭಕ್ತರ ಮಧ್ಯೆ ಸೇತುವೆ ಇದ್ದಂತೆ

ಪುರೋಹಿತರು, ದೇವರ ಮತ್ತು ಭಕ್ತರ ಮಧ್ಯೆ ಸೇತುವೆ ಇದ್ದಂತೆ

ಮಲೇಬೆನ್ನೂರು : ಪುರೋಹಿತರು, ಅರ್ಚಕರು ಎಲ್ಲಿಯವರೆಗೆ ಸಂಘಟನೆ ಆಗುವುದಿಲ್ಲವೋ ಅಲ್ಲಿಯವರೆಗೆ  ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ ಎಂದು ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಖಜಾಂಚಿ ಕೆ.ಜಿ.ಮಹದೇವಸ್ವಾಮಿ (ಗಣೇಶ್ ಶಾಸ್ತ್ರಿ) ಅಭಿಪ್ರಾಯಪಟ್ಟರು.