ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಹಳ್ಳಿಗಳಿಗೆ ಬಸ್ ಬರ್ತಿಲ್ಲ, ನಮ್ ಕಷ್ಟ ತಪ್ಪಿಲ್ಲ

ಹಳ್ಳಿಗಳಿಗೆ ಬಸ್ ಬರ್ತಿಲ್ಲ, ನಮ್ ಕಷ್ಟ ತಪ್ಪಿಲ್ಲ

ಲಾಕ್‌ಡೌನ್‌ ಸಡಿಲಿಕೆಯಾದರೂ ಬಸ್ಸುಗಳು ಹಳ್ಳಿಗಳತ್ತ ಮುಖ ಮಾಡಿಲ್ಲ. ಕೊಡು-ಕೊಳ್ಳುವಿಕೆಗೆ, ಕೆಲಸ, ಕಾರ್ಯಗಳಿಗೆ ಗ್ರಾಮೀಣರು ನಗರಗಳಿಗೆ ಬರಬೇಕಾದರೆ, ಸ್ವಂತ ವಾಹನಗಳನ್ನೇ ಅವಲಂಬಿಸಬೇಕಿದೆ. 

ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹ

ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿ ಗೆ ಕೋವಿಡ್-19 ಪರಿಹಾರಕ್ಕಾಗಿ ಆಗ್ರಹಿಸಿ ನಗರದಲ್ಲಿ ನಾಡಿದ್ದು ದಿನಾಂಕ  30ರ ಮಂಗಳವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ವ್ಯಾಪಾರಿಗಳಲ್ಲಿ ಮೂಡದ ಒಮ್ಮತ

ವ್ಯಾಪಾರಿಗಳಲ್ಲಿ ಮೂಡದ ಒಮ್ಮತ

ಹರಿಹರದಲ್ಲಿ ಲಾಕ್‌ಡೌನ್ ನಿರ್ಧಾರಕ್ಕೆ ಕೆಲ ವ್ಯಾಪಾರಸ್ಥರು ಮನ್ನಣೆ ನೀಡದೇ ಇರುವ ಕಾರಣ ಎಲ್ಲರಲ್ಲೂ ಗೊಂದಲ ಮನೆ ಮಾಡಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ

ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ

ಕೊರೊನಾ ಸಾಮಾಜಿಕ ಅಂತರದ ನಡುವೆ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆಗೆ ಹೋಲಿಸಿದರೆ, ಎಸ್ಸೆಸ್ಸೆಲ್ಸಿಯ ಮೊದಲ ದಿನದ ಇಂಗ್ಲಿಷ್ ಪರೀಕ್ಷೆ ಹೆಚ್ಚು ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿತ್ತು.

ನಿವೃತ್ತ ಇಂಜಿನಿಯರ್ ನಿವೃತ್ತಿ ಹಣ ಹೂಡಿಕೆ : ಲಾಭ ನೀಡುವುದಾಗಿ ವಂಚನೆ

ಲಾಭ ನೀಡುವುದಾಗಿ ನಂಬಿಸಿ ತಾವು ದುಡಿದ ಮತ್ತು ನಿವೃತ್ತಿಯ ಹಣವನ್ನು ಹೂಡಿಕೆ ಮಾಡಿಸಿಕೊಂಡು 21. 50 ಲಕ್ಷ ರೂ. ವಂಚಿಸಿರುವುದಾಗಿ ನಿವೃತ್ತ ಸಹಾಯಕ ಇಂಜಿನಿಯರ್ ಕೆ.ಎಂ. ಮುರುಗೇಂದ್ರಯ್ಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಗ್ಯ ಕಾರ್ಯಕರ್ತೆ ಸೇರಿ ಏಳು ಜನರಿಗೆ ಪಾಸಿಟಿವ್

ದಾವಣಗೆರೆ ನಗರದಲ್ಲಿ ಮೂರು, ಹೊನ್ನಾಳಿಯ ಕ್ಯಾಸಿನಕೆರೆಯಲ್ಲಿ ಎರಡು, ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿಯಲ್ಲಿ ಒಂದು ಪ್ರಕರಣ ಗಳು ದೃಢಪಟ್ಟಿವೆ. ಸೋಂಕು ದೃಢಪಟ್ಟಿರುವವರಲ್ಲಿ ಮಾಗಾನಹಳ್ಳಿಯ ಆರೋಗ್ಯ ಕಾರ್ಯಕರ್ತೆ ಸಹ ಸೇರಿದ್ದಾರೆ.

ಹರಪನಹಳ್ಳಿ: ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಸಿದ ಅಧಿಕಾರಿಗಳು

ಹರಪನಹಳ್ಳಿ : ತಾಲ್ಲೂಕಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 13 ಪರೀಕ್ಷಾ ಕೇಂದ್ರಗಳಿಂದ  3788 ವಿದ್ಯಾ ರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 115 ಗೈರಾಗಿ, 3673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಸ್ಮಾರ್ಟ್ ಸಿಟಿಯಿಂದ 102 ಸ್ಮಾರ್ಟ್ ಕ್ಲಾಸ್

ಸ್ಮಾರ್ಟ್ ಸಿಟಿಯಿಂದ 102 ಸ್ಮಾರ್ಟ್ ಕ್ಲಾಸ್

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲು ವಿದ್ವತ್ ಎಜುಕೇಷನಲ್ ಮೊಬೈಲ್ ಆಪ್ ಸಹ ಒದಗಿಸಲಾಗುತ್ತಿದೆ. ಈ ಆಪ್ ಸರ್ಕಾರಿ ಶಾಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳ ಕಾಲ ಉಚಿತವಾಗಿ ಸಿಗಲಿದೆ.

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸಮೂಹ ಪ್ರತಿಭಟನೆ

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸಮೂಹ ಪ್ರತಿಭಟನೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಮತ್ತು ಪಕ್ಷದ ವಿವಿಧ ಘಟಕಗಳು ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಏಕ ಕಾಲದಲ್ಲಿ ಪ್ರತಿಭಟಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ವರ್ಷಾಂತ್ಯಕ್ಕೆ ಹೆದ್ದಾರಿ ಯೋಜನೆ ಪೂರ್ಣಗೊಳಿಸಿ: ಸಂಸದ ಸಿದ್ದೇಶ್ವರ

ವರ್ಷಾಂತ್ಯಕ್ಕೆ ಹೆದ್ದಾರಿ ಯೋಜನೆ ಪೂರ್ಣಗೊಳಿಸಿ: ಸಂಸದ ಸಿದ್ದೇಶ್ವರ

ಆರು ತಿಂಗಳ ಒಳಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ  ಸೂಚನೆ ನೀಡಿದರು.

ಹರಿಹರದಲ್ಲಿ ಇಂದಿನಿಂದ ಮಧ್ಯಾಹ್ನ 2ರ ನಂತರ ಲಾಕ್‌ಡೌನ್

ಹರಿಹರದಲ್ಲಿ ಇಂದಿನಿಂದ ಮಧ್ಯಾಹ್ನ 2ರ ನಂತರ ಲಾಕ್‌ಡೌನ್

ಹರಿಹರದಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳು ಹೆಚ್ಚಾಗುತ್ತಿರುವುದರಿಂದ ನಗರದಲ್ಲಿನ ವಹಿವಾಟನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2  ರವರೆಗೆ ಮಾತ್ರ ನಡೆಸಿ, ನಂತರ ಸಂಪೂರ್ಣ ಲಾಕ್‌ಡೌನ್ ಮಾಡಲು ತೀರ್ಮಾನಕ್ಕೆ ಬರಲಾಯಿತು.

ಕೊರೊನಾ ವಾರಿಯರ್‌ಗಳಿಗೆ ಟೆಸ್ಟ್‌

ರಾಜ್ಯ ಸರ್ಕಾರದ ನಿರ್ದೇಶನದಂತೆ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆ ಯರು, ಪೊಲೀಸರೂ ಸೇರಿದಂತೆ ಕೊರೊನಾ ವಾರಿಯರ್‌ಗಳ ಕೊರೊನಾ ಟೆಸ್ಟ್ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಒಂದೇ ದಿನದ 1,075 ಜನರನ್ನು ಟೆಸ್ಟ್‌ಗೆ ಒಳಪಡಿಸಲಾಗಿದೆ

ಲಾಕ್‌ಡೌನ್‌ ನಡುವೆ ವಿಕಲಚೇತನರ ‘ಮೂಕ’ ರೋಧನೆ

ಕೊರೊನಾ ಸಂಕಷ್ಟಕ್ಕೆ ಮುಂಚೆಯೇ ವಿಕಲಚೇತನರು ಸಮಾಜದಲ್ಲಿ ಅಸಮಾನತೆ ಎದುರಿಸುತ್ತಿದ್ದರು. ಲಾಕ್‌ಡೌನ್ ಹೇರಿಕೆಯ ನಂತರವಂತೂ ಅವರ ಪರಿಸ್ಥಿತಿ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ. 

ಸುಳ್ ಸುಳ್ಳೇ ಪಾಸಿಟಿವ್

ಆವರಗೊಳ್ಳ ಹಾಗೂ ದೊಡ್ಡಬಾತಿಯ ನಾಲ್ವರು ಗರ್ಭಿಣಿಯರು ಸೇರಿದಂತೆ ಆರು ಜನರಿಗೆ ಯಾವುದೇ ಕೊರೊನಾ ಸೋಂಕಿಲ್ಲದಿದ್ದರೂ, ಪರೀಕ್ಷೆಯಲ್ಲಿ ಆದ ಲೋಪದಿಂದಾಗಿ ಹುಸಿ ಪಾಸಿಟಿವ್ ಬಂದಿದೆ.