ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಮಲಬಾರ್ ಗೋಲ್ಡ್‌ನಿಂದ ಕಿಟ್

ಮಲಬಾರ್ ಗೋಲ್ಡ್‌ನಿಂದ ಕಿಟ್

ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಮಲಬಾರ್ ಗೋಲ್ಡ್ ವತಿಯಿಂದ ಇಂದು ನೂರು ಆಹಾರದ ಕಿಟ್‌ಗಳನ್ನು  ಹೊರಗುತ್ತಿಗೆ ಆಧಾರದ ಶುಶ್ರೂಷಕರಿಗೆ ವಿತರಿಸಲಾಯಿತು.

ಚಿತ್ರದುರ್ಗ ಜಿ.ಪಂ. ಅಧ್ಯಕ್ಷೆ ಶಶಿಕಲಾ  ಅವರಿಗೆ ಬೆಳ್ಳೂಡಿ ಶ್ರೀ ಆಶೀರ್ವಾದ

ಚಿತ್ರದುರ್ಗ ಜಿ.ಪಂ. ಅಧ್ಯಕ್ಷೆ ಶಶಿಕಲಾ ಅವರಿಗೆ ಬೆಳ್ಳೂಡಿ ಶ್ರೀ ಆಶೀರ್ವಾದ

ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಶಶಿಕಲಾ ಸುರೇಶ್ ಬಾಬು ಅವರು ಭಾನುವಾರ ಕಾಗಿನೆಲೆ ಕನಕ ಗುರುಪೀಠಕ್ಕೆ ಭೇಟಿ ನೀಡಿದ್ದರು.

ಬಿಐಇಟಿ ವಿದ್ಯಾರ್ಥಿಗಳಿಂದ ನೆರವು

ಬಿಐಇಟಿ ವಿದ್ಯಾರ್ಥಿಗಳಿಂದ ನೆರವು

ನಗರದ ಬಾಪೂಜಿ ಇನ್‌ಸ್ಟಿ ಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ 2ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳುದಿನನಿತ್ಯದ ಸಾಮಗ್ರಿಗಳನ್ನು ಹಾಗೂ ಧನ ಸಹಾಯ ಮಾಡಿದರು.

ಆರೋಗ್ಯ ಅಭಿಯಾನ ಗುತ್ತಿಗೆ ಹಾಗೂ ಸ್ಕೀಂ ನೌಕರರ ಪ್ರತಿಭಟನೆ

ಆರೋಗ್ಯ ಅಭಿಯಾನ ಗುತ್ತಿಗೆ ಹಾಗೂ ಸ್ಕೀಂ ನೌಕರರ ಪ್ರತಿಭಟನೆ

ಕೋವಿಡ್-19 ಕರ್ತವ್ಯದಲ್ಲಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುತ್ತಿರುವ ಎಲ್ಲಾ ಗುತ್ತಿಗೆ ಹಾಗೂ ಸ್ಕೀಂ ನೌಕರರಿಂದ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ಭಗತ್‌ಸಿಂಗ್ ಎಂಪ್ಲಾಯ್‌ಮೆಂಟ್ ಗ್ಯಾರೆಂಟಿ ಆಗ್ರಹ

ಭಗತ್‌ಸಿಂಗ್ ಎಂಪ್ಲಾಯ್‌ಮೆಂಟ್ ಗ್ಯಾರೆಂಟಿ ಆಗ್ರಹ

ನಿರುದ್ಯೋಗಿ ಯುವಕರಿಗೆ ಸಹಾಯಧನ ನೀಡಬೇಕು ಹಾಗೂ ಭಗತ್‌ಸಿಂಗ್ ಎಂಪ್ಲಾಯ್‌ಮೆಂಟ್ ಗ್ಯಾರೆಂಟಿ ಆಕ್ಟ್‌ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಪ್ರತಿಭಟನೆ ನಡೆಸಿತು.

ಸ್ಕೌಟ್ಸ್-ಗೈಡ್ಸ್‌ನಿಂದ ಕಿಟ್ ವಿತರಣೆ

ಸ್ಕೌಟ್ಸ್-ಗೈಡ್ಸ್‌ನಿಂದ ಕಿಟ್ ವಿತರಣೆ

ಲಾಕ್‌ಡೌನ್ ಹಿನ್ನೆ ಲೆಯಲ್ಲಿ ಜಿಲ್ಲಾ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕಚೇರಿಯಲ್ಲಿ ಸಂಸ್ಥೆ ವತಿಯಿಂದ 10 ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.

ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ರಾಣೇಬೆನ್ನೂರಿನ ಕೃಷಿ ಇಲಾ ಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಶಾಸಕ ಅರುಣಕುಮಾರ ಪೂಜಾರ್ ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿದರು.

ಕೊರೊನಾ ಜಾಗೃತಿ ಅಭಿಯಾನ

ಕೊರೊನಾ ಜಾಗೃತಿ ಅಭಿಯಾನ

ಕೊರೊನಾ ಬಗ್ಗೆ ಜಾಗೃತಿ ಅಭಿಯಾನ ವನ್ನು ವಿದ್ಯಾನಗರದ ವಿನಾಯಕ ಬಡಾವಣೆಯ ಎಲ್ಲಾ ಕಾಲೋನಿಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು.

ಕರುಣಾದಿಂದ ಸಿಲಿಂಡರ್ ವಿತರಣೆ

ಕರುಣಾದಿಂದ ಸಿಲಿಂಡರ್ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ನ ವತಿಯಿಂದ ಮನೆಗೆಲಸ, ಕೂಲಿ, ಹೋಟೆಲ್‌ಗಳಲ್ಲಿ ಕೆಲಸ ಮಾಡಿ, ಜೀವನ ನಿರ್ವಹಣೆ ಮಾಡುತ್ತಿರುವ ಬಡ ಕುಟುಂಬ ಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು.

ಬಿ.ಕಲಪನಹಳ್ಳಿಯಲ್ಲಿ ಕಿಟ್‌ ವಿತರಣೆ

ಬಿ.ಕಲಪನಹಳ್ಳಿಯಲ್ಲಿ ಕಿಟ್‌ ವಿತರಣೆ

ಬಿ.ಕಲಪನಹಳ್ಳಿ ಗ್ರಾಮದ ಎ.ಕೆ. ಕಾಲೋನಿ ಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಸದಸ್ಯರುಗಳು ನಿರಾಶ್ರಿತರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು.