ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಅಮ್ಮನನ್ನು ಕಳುಹಿಸುವ ಕಾರ್ಯಕ್ರಮ

ಅಮ್ಮನನ್ನು ಕಳುಹಿಸುವ ಕಾರ್ಯಕ್ರಮ

ಹರಪನಹಳ್ಳಿ : ಕೊರೊನಾ ಮಹಾಮಾರಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ತೊಲಗಲಿ ಎಂದು  ಕೋರಿ, ಪಟ್ಟಣದ ವಾಲ್ಮೀಕಿ ನಗರದಲ್ಲಿ ಅಮ್ಮನನ್ನು ಕಳುಹಿಸಲಾಯಿತು.

ಶ್ರೀಧರ್ ಹತ್ಯೆ ಸಿಐಡಿ ತನಿಖೆಗೆ ವಹಿಸಿ

ಶ್ರೀಧರ್ ಹತ್ಯೆ ಸಿಐಡಿ ತನಿಖೆಗೆ ವಹಿಸಿ

ಹರಪನಹಳ್ಳಿ : ಆರ್‌ಟಿಐ ಕಾರ್ಯಕರ್ತ ಟಿ. ಶ್ರೀಧರ್ ಹತ್ಯೆ ಪ್ರಕರಣವನ್ನು  ಸಿಐಡಿ ತನಿಖೆಗೆ ವಹಿಸಬೇಕು ಎಂದು ಗೃಹ ಇಲಾಖೆ ಹಾಗೂ ಡಿಐಜಿಗೆ ಪತ್ರ ಬರೆಯುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಆಗ್ರಹಿಸಿದ್ದಾರೆ.

ಜಿಲ್ಲಾ ಕೈಮಗ್ಗ – ಜವಳಿ ಇಲಾಖೆಯಿಂದ ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮ

ಜಿಲ್ಲಾ ಕೈಮಗ್ಗ – ಜವಳಿ ಇಲಾಖೆಯಿಂದ ಕಾರ್ಮಿಕರಿಗೆ ಲಸಿಕೆ ಕಾರ್ಯಕ್ರಮ

ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್ - 19 ಪ್ರಯುಕ್ತ ಜವಳಿ ಕೈಗಾರಿಕಾ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು.  

ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಡಿಸಿ, ಎಸ್ಪಿ ಭೇಟಿ

ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಡಿಸಿ, ಎಸ್ಪಿ ಭೇಟಿ

ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಸೇತುವೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಲ್ಲಿಕಾರ್ಜುನ ಸಮುದಾಯ ಭವನಕ್ಕೆ ಲಿಫ್ಟ್‌ ಅಳವಡಿಸಲು ಮನವಿ

ಮಲ್ಲಿಕಾರ್ಜುನ ಸಮುದಾಯ ಭವನಕ್ಕೆ ಲಿಫ್ಟ್‌ ಅಳವಡಿಸಲು ಮನವಿ

ಸ್ಥಳೀಯ ಕೆಟಿಜೆ ನಗರದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನಕ್ಕೆ ಶೇ. 24.10 ರ ಅನುದಾನದಲ್ಲಿ ಅಂಗವಿಕರಿಗೆ ಹಾಗೂ ವೃದ್ಧರಿಗೋಸ್ಕರ ಲಿಫ್ಟ್‌ ಅಳವಡಿಸಲು ಮತ್ತು ನೆಲ ಅಂತಸ್ತಿಗೆ ಗ್ರಾನೈಟ್‌ ಮತ್ತು ಟೈಲ್ಸ್‌ ಅಳವಡಿಸಲು ಮಹಾಪೌರರಾದ ಎಸ್.ಟಿ. ವೀರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. 

ಮಳೆ : ಸರಸ್ವತಿ ನಗರದಲ್ಲಿ ನೆಲಕ್ಕುರುಳಿದ ಮರ

ಮಳೆ : ಸರಸ್ವತಿ ನಗರದಲ್ಲಿ ನೆಲಕ್ಕುರುಳಿದ ಮರ

ನಗರದಲ್ಲಿ ಸತತವಾಗಿ ಸುರಿದ ಮಳೆ ಯಿಂದಾಗಿ ನಗರ ಪಾಲಿಕೆಯ 33ನೇ ವಾರ್ಡಿನ ಸರಸ್ವತಿ ನಗರ `ಬಿ' ಬ್ಲಾಕ್ ನಲ್ಲಿ ನೆಲಕ್ಕುರುಳಿದ ಮರವನ್ನು ಆ ವಾರ್ಡಿನ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಪಾಲಿಕೆ ಸಿಬ್ಬಂದಿ ಮೂಲಕ ತೆರವುಗೊಳಿಸಿದರು.

ರೆಡ್‌ಕ್ರಾಸ್‌ನಿಂದ ಕಿಟ್ ವಿತರಣೆ

ರೆಡ್‌ಕ್ರಾಸ್‌ನಿಂದ ಕಿಟ್ ವಿತರಣೆ

ನಗರದ ರೆಡ್ ಕ್ರಾಸ್ ಭವನದಲ್ಲಿ ಅಜೀಂ ಪ್ರೇಮಜೀ ಫೌಂಡೇಶನ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಸಹಭಾಗಿತ್ವದಲ್ಲಿ ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ರೇಷನ್ ಕಿಟ್  ವಿತರಿಸಲಾಯಿತು.

ಲಯನ್ಸ್‌ ಕ್ಲಬ್‌ನಿಂದ ಲಸಿಕಾ ಶಿಬಿರ

ಲಯನ್ಸ್‌ ಕ್ಲಬ್‌ನಿಂದ ಲಸಿಕಾ ಶಿಬಿರ

ಜಿಲ್ಲಾಡಳಿತದ ಸಹಕಾರದೊಂದಿಗೆ ನಗರದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ಲಯನ್ಸ್  ಅಧ್ಯಕ್ಷ ಓಂಕಾರಪ್ಪ ಅವರ ಅಧ್ಯಕ್ಷತೆಯಲ್ಲಿ ಲಯನ್ಸ್ ಸದಸ್ಯರಿಗೆ ಕೋವಿಡ್ ಲಸಿಕೆ ನೀಡಲಾಯಿತು. 

ಸಚಿವರಿಂದ 3 ಆಂಬ್ಯುಲೆನ್ಸ್ ಬಿಡುಗಡೆ

ಸಚಿವರಿಂದ 3 ಆಂಬ್ಯುಲೆನ್ಸ್ ಬಿಡುಗಡೆ

ರಾಣೇಬೆನ್ನೂರು : ತಾಲ್ಲೂಕಿನ ತುಮ್ಮಿನಕಟ್ಟೆ, ಮೆಡ್ಲೇರಿ ಹಾಗೂ ನಗರದ ಅಂಜುಮನ್ ಸಂಸ್ಥೆಯವರಿಗೆ ತಮ್ಮ ಅನುದಾನದಲ್ಲಿ ತರಲಾದ  ಮೂರು ಆಂಬ್ಯುಲೆನ್ಸ್‌ಗಳನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ಸಚಿವ ಆರ್‌. ಶಂಕರ್ ಬಿಡುಗಡೆ ಮಾಡಿದರು.