ಹರಿಹರ : ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಯಾದರೆ ಮಾದಿಗ ಸಮಾಜ ತಕ್ಷಣವೇ ಅಭಿವೃದ್ಧಿ ಕಾಣುವುದಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯವಾದಿ ಎ. ಹನುಮಂತಪ್ಪ ಹೇಳಿದರು.
Category: ಸುದ್ದಿ ವೈವಿಧ್ಯ
ಸತ್ಯ ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ
ನ್ಯಾಮತಿ : ಭಾರತೀಯ ಸಂಸ್ಕೃತಿಯಲ್ಲಿ ಸತ್ಯ ಮತ್ತು ಧರ್ಮಕ್ಕೆ ಬಹಳಷ್ಟು ಬೆಲೆಯಿದೆ. ಸತ್ಯ ಮಾರ್ಗದಲ್ಲಿ ನಡೆಯುವುದು ಕಷ್ಟವಾದರೂ ಅದನ್ನು ಬಿಡದೇ ನಡೆ ನುಡಿ ಒಂದಾಗಿ ಬಾಳುವುದು ಮುಖ್ಯ
ಸ್ವಾವಲಂಬನೆಯ ಸ್ವಾಭಿಮಾನ ರಾಷ್ಟ್ರ ನಿರ್ಮಾಣ ಅಗತ್ಯ
ಸ್ವಾಭಿಮಾನ, ಸ್ವದೇಶಿ ಜಾಗೃತಿ ಮತ್ತು ಸ್ವಾವಲಂಬನೆಯ ಬದುಕನ್ನು ರೂಢಿಸಿಕೊಂಡರೆ ಬೌದ್ಧಿಕವಾಗಿ ಸದೃಢವಾಗಿರುವ ಭಾರತೀಯರು ತಮ್ಮ ಸಾಮರ್ಥ್ಯವನ್ನು ಅರಿತು ಮುನ್ನಡೆದರೆ ಭಾರತವನ್ನು ವಿಶ್ವದ ಮಹಾನ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಾಧ್ಯ ಎಂದು ಆದರ್ಶ ಗೋಖಲೆ ವಿಶ್ವಾಸ ವ್ಯಕ್ತಪಡಿಸಿದರು.
ಜ್ಞಾನ ದ್ವೀಪವಾಗದೇ ಜನ ತಲುಪಲಿ
ಜ್ಞಾನವು ದ್ವೀಪದಂತೆ ಜ್ಞಾನಿಗಳ ತಲೆಯಲ್ಲಿ ಉಳಿದುಕೊಳ್ಳದೇ ಜನಸಾಮಾನ್ಯರಿಗೆ ತಲುಪಬೇಕು. ಇದಕ್ಕಾಗಿ ಮಾತೃಭಾಷೆಯ ಮೂಲಕ ಸಂಹವನ ಮಾಡುವುದೇ ಸೂಕ್ತ ಎಂದು ಜನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣ
ಕೊಂಡಜ್ಜಿ : ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ನೌಕರರು ಬಹಳ ಒತ್ತಡದಲ್ಲಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಬಿ. ಆನಂದ್ ಅಭಿಪ್ರಾಯಪಟ್ಟರು.
ಕನ್ನಡ ಪರ ಸಂಘಟನೆಗಳ ಒಗ್ಗಟ್ಟಿನಿಂದ ಭಾಷೆ ಬಲಿಷ್ಠವಾಗಲು ಸಾಧ್ಯ
ಒಗ್ಗಟ್ಟಿನ ಬಲದಿಂದ ಕರ್ನಾಟಕದಲ್ಲಿ ಕನ್ನಡ ಡಿಂಡಿಮ ಮೊಳಗಿ, ಸಾರ್ವಭೌತ್ವ ಕಾಣಲು ಸಾಧ್ಯ. ಇದಕ್ಕಾಗಿ ಎಲ್ಲಾ ಕನ್ನಡ ಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಆಶಿಸಿದರು.
ಸ್ಮಾರ್ಟ್ಸಿಟಿ ಕಾಮಗಾರಿ ಪರಿಶೀಲಿಸಿದ ಸಚಿವ ಭೈರತಿ
ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪರಿಶೀಲಿಸುವ ಉದ್ದೇಶ ದಿಂದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೋಮವಾರ ಬೆಳ್ಳಂಬೆಳಿಗ್ಗೆ ನಗರ ಪ್ರದಕ್ಷಿಣಿ ಕೈಗೊಂಡಿದ್ದರು.
ಎಸ್ಸೆಸ್ ಅವರಿಗೆ ಲಯನ್ಸ್ ಕ್ಲಬ್ಬಿನ ಗೌರವ ಸದಸ್ಯತ್ವ
ಪ್ರತಿಷ್ಠಿತ ಸಾಮಾಜಿಕ ಸೇವಾ ಸಂಸ್ಥೆ ದಾವಣಗೆರೆ ಲಯನ್ಸ್ ಕ್ಲಬ್ಬಿನ ಗೌರವ ಸದಸ್ಯರನ್ನಾಗಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.
ನಗರದಲ್ಲಿ ವಾಸವಿರದ ವಿಧಾನ ಪರಿಷತ್ ಸದಸ್ಯರುಗಳನ್ನು ಕೈಬಿಡಲು ಒತ್ತಾಯ
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರ ನೇತೃತ್ವದಲ್ಲಿ ಜಿಲ್ಲಾ ಚುನಾವಣಾ ವೀಕ್ಷಕ ಉಮಾಶಂಕರ್ ಅವರಿಗೆ ಕಳೆದ ಮೇಯರ್ – ಉಪಮೇಯರ್ ಚುನಾವಣೆಯಲ್ಲಿ ನಗರದಲ್ಲಿ ವಾಸವಿಲ್ಲದ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಬದುಕಿನಲ್ಲಿ ಹೊಂದಾಣಿಕೆ, ಸಾಮರಸ್ಯ ಬೇಕು
ಚಿತ್ರದುರ್ಗ : ಉಸಿರಾಟ ಜೀವಂತಿಕೆಯನ್ನು ತೋರಿಸುತ್ತದೆ. ಮಾನವ ಉಸಿರಾಟದ ಪ್ರಕ್ರಿಯೆಯಂತೆ ಧರ್ಮ, ಮೌಲ್ಯ, ಸಿದ್ಧಾಂತಗಳನ್ನು ಸದಾ ತನ್ನೊಳಗಿರಿಸಿಕೊಳ್ಳಬೇಕು. ಅಂಥ ವ್ಯಕ್ತಿ ನಡೆದಾಡುವ ದೇವಾಲಯವಾಗುತ್ತಾನೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಿಸಿದರು.