ಮಕ್ಕಳ ಚಟುವಟಿಕೆಗೆ ಅನುದಾನ ಮೀಸಲಿಡಬೇಕು, ಎಸ್ಸಿ, ಎಸ್ಟಿ ಅನುದಾನ ಆ ಸಮುದಾಯಕ್ಕೆ ಬಳಕೆಯಾಗಬೇಕು. ಜೀವ ವೈವಿಧ್ಯ ಚಟುವಟಿಕೆಗೆ ಅನುದಾನ ಮೀಸಲಿಡುವುದು, ನಾಗರಿಕರ ಮೂಲಭೂತ ಸೌಲಭ್ಯಗಳಿಗೆ ಆಯವ್ಯಯದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು.
Category: ಪ್ರಮುಖ ಸುದ್ದಿಗಳು
ಅತಿ ಕಷ್ಟದ ದಿನಗಳಲ್ಲಿ ಮಾಧ್ಯಮ ಕ್ಷೇತ್ರ
ಮಾಧ್ಯಮ ವೃತ್ತಿ ಉದ್ಯಮವಾಗಿ ಪರಿವರ್ತನೆಯಾದಾಗ ಬಂಡವಾಳ ಬರುತ್ತದೆ. ಪತ್ರಕರ್ತರಿಗೆ ವೇತನ ಸಿಗುತ್ತದೆ ಎಂಬ ಸಮಾಧಾನವಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಆ ಭರವಸೆಯೂ ಕಾಣುತ್ತಿಲ್ಲ
ಲಾಭ ಗಳಿಸಲು ಸಮಗ್ರ ಕೃಷಿ ನೀತಿ ಅಳವಡಿಸಿಕೊಳ್ಳಿ
ಕೃಷಿಯನ್ನು ಲಾಭದಾಯಕವಾಗಿಸಲು ರೈತರು ಸಮಗ್ರ ಕೃಷಿ ನೀತಿ ಅಳವಡಿಕೊಳ್ಳುವುದರ ಜೊತೆಗೆ, ಬೆಳೆ ಸಂಸ್ಕರಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದಾಗ ಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯ್ತಿಗಳಲ್ಲೂ ಕಮಲ
ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಿದ್ದರೆ, ಕಾಂಗ್ರೆಸ್ ಮುಳುಗುತ್ತಿ ರುವ ಹಡಗಿನಂತಾಗಿದೆ. ಮುಂದಿನ ದಿನ ಗಳಲ್ಲಿ ಬಿಜೆಪಿ ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಗಳಲ್ಲೂ ಗೆಲುವು ಸಾಧಿಸಲಿದೆ
ಜಾತ್ರೆ ವೇಳೆಗೆ ಮೀಸಲಾತಿ ಹೆಚ್ಚಿಸದಿದ್ದರೆ ಜಾತ್ರೆಯಂದು ನಮ್ಮ ತೀರ್ಮಾನ ಪ್ರಕಟ : ವಾಲ್ಮೀಕಿ ಸ್ವಾಮೀಜಿ ಎಚ್ಚರಿಕೆ
ಮಲೇಬೆನ್ನೂರು : ಎಸ್ಸಿ-ಎಸ್ಟಿ ಜನರನ್ನು ಸರ್ಕಾರಗಳು ತಾತ್ಸಾರದಿಂದ ನೋಡುತ್ತಾ ಬಂದಿದ್ದು, ಚುನಾವಣೆ ಬಂದಾಗ ಹಣ, ಹೆಂಡ ಕೊಟ್ಟರೆ ಅವರು ನಾವು ಹೇಳಿದಂತೆ ಕೇಳುತ್ತಾರೆ ಎಂಬ ಕೀಳರಿಮೆ ರಾಜಕೀಯ ಮುಖಂಡರಲ್ಲಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಬೇಸಿಗೆಯೊಳಗಾಗಿ ಬಾಕಿ ಸ್ಮಾರ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು : ಉಸ್ತುವಾರಿ ಸಚಿವರ ಸೂಚನೆ
ಸ್ಮಾರ್ಟ್ ಸಿಟಿ ಯೋಜನೆಯಡಿ 975.93 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ 90 ಕಾಮಗಾರಿಗಳ ಪೈಕಿ 24 ಕಾಮಗಾರಿಗಳು ಮಾತ್ರ ಪೂರ್ಣ ಗೊಂಡಿದ್ದು, 54 ಕಾಮಗಾರಿಗಳು ಮಂದಗತಿ ಯಲ್ಲಿ ಸಾಗಿವೆ, ಉಳಿದ 11 ಕಾಮಗಾರಿಗಳು ಇನ್ನೂ ಟೆಂಡರ್ ಹಂತದಲ್ಲಿವೆ.
ರೆವಿನ್ಯೂ ನಿವೇಶನ ಸಕ್ರಮಕ್ಕೆ ಚಿಂತನೆ
ಮಹಾನಗರ ಪಾಲಿಕೆಗಳು ಸೇರಿದಂತೆ ರಾಜ್ಯದ ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ, ವ್ಯಾಪ್ತಿಯಲ್ಲಿನ ರೆವಿನ್ಯೂ ನಿವೇಶನಗಳನ್ನು ಸಕ್ರಮಗೊಳಿಸಲು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಕಾಮಗಾರಿಗಾಗಿ ಕೆರೆ ಖಾಲಿ
ದಾವಣಗೆರೆ ನಗರದ ಕುಂದುವಾಡ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯ ನೀರನ್ನು ನಿಧಾನವಾಗಿ ಖಾಲಿ ಮಾಡಲಾಗುತ್ತಿದ್ದು, ಪಕ್ಷಿಗಳು ಕೆರೆಯ ನಡುಗಡ್ಡೆಯಲ್ಲಿ ಆಶ್ರಯ ಪಡೆಯುತ್ತಿವೆ.
ಮೂರು ಶಾಪಗಳಿಂದ ಕಾಂಗ್ರೆಸ್ ಅವನತಿ
ಹೊನ್ನಾಳಿ : ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗೋಮಾತೆ ಶಾಪದಿಂದ ಭಾರತ ಕಾಂಗ್ರೆಸ್ ಮುಕ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬುದ್ಧಿವಂತಿಕೆ, ಕರುಣೆ, ಕೌಶಲ್ಯಗಳನ್ನು ರೂಢಿಸಿಕೊಳ್ಳಿ
ಕೇವಲ ಪಠ್ಯದ ಅಧ್ಯಯನದಿಂದ ಶಿಕ್ಷಣದಲ್ಲಿ ಪೂರ್ಣ ಯಶಸ್ಸು ಸಿಗುವುದಿಲ್ಲ. ಓದಿನ ಜೊತೆಗೆ ಬುದ್ಧಿವಂತಿಕೆ, ಕರುಣೆ ಹಾಗೂ ಕೌಶಲ್ಯಗಳನ್ನೂ ರೂಢಿಸಿಕೊಳ್ಳಬೇಕು ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ತಿಳಿಸಿದ್ದಾರೆ.