ಕೂಡ್ಲಿಗಿ : ಎರಡು ಕಾಲುಗಳನ್ನು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಕೂಡ್ಲಿಗಿ ಸಮೀಪದ ಮೊರಬನಹಳ್ಳಿ ಹೊರವಲಯದಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Category: ಅಪರಾಧ
ಗಾಂಜಾ ಮಾರಾಟ : ನಾಲ್ವರ ಬಂಧನ
ಗಾಂಜಾ ಮಾರಾಟದ ವೇಳೆ ದಾಳಿ ನಡೆಸಿರುವ ಕೆಟಿಜೆ ನಗರ ಪೊಲೀಸರು ನಾಲ್ವರನ್ನು ಬಂಧಿಸಿ, 40 ಸಾವಿರ ಮೌಲ್ಯದ 1 ಕೆಜಿ ಗಿಂತಲೂ ಹೆಚ್ಚಿನ ಗಾಂಜಾ ಹಾಗೂ 2 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನೆಲಮಂಗಲ ಸಾರಿಗೆ ಇಲಾಖೆ ಜೀಪ್ ಚಾಲಕನ ಕಿರುಕುಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಾರಿಗೆ ಕಚೇರಿಯ ಜೀಪ್ ಚಾಲಕ ನಾಗಪ್ಪನ ವಿರುದ್ಧ ಸಾಕಷ್ಟು ದೂರುಗಳಿದ್ದು, ಈತನು ಸಾರಿಗೆ ವಾಹನಗಳ ಚಾಲಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದಾರೆ
ಗಾಂಜಾ ಮತ್ತಲ್ಲಿ ದರೋಡೆಗೆ ಯತ್ನ: ಇಬ್ಬರ ಬಂಧನ
ಗಾಂಜಾ ಮತ್ತಿನಲ್ಲಿ ಸಾರ್ವಜನಿಕರಿಗೆ ಚಾಕುಗಳನ್ನು ತೋರಿಸಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ದರೋಡೆಕೋರರನ್ನು ಹೊನ್ನಾಳಿ ಪೋಲಿಸರು ಬಂಧಿಸಿದ್ದಾರೆ.
ಬಸ್ ಹರಿದು ಬಾಲಕಿ ಸಾವು
ಸರ್ಕಾರಿ ಬಸ್ ಹರಿದ ಪರಿಣಾಮ ತಂದೆಯೊಡನೆ ರಸ್ತೆ ದಾಟುತ್ತಿದ್ದ ಬಾಲಕಿಯೋರ್ವಳು ಭೀಕರ ವಾಗಿ ಸಾವನ್ನಪ್ಪಿರುವ ಘಟನೆ ಗುತ್ತೂರಿನ ಹರಿಹರ-ಹರಪನ ಹಳ್ಳಿ ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಮನೆಗಳ್ಳತನ: ಚಿನ್ನಾಭರಣ, ನಗದು ಕಳವು
ಮನೆಗೆ ಕನ್ನ ಹಾಕಿರುವ ಕಳ್ಳರು 50 ಸಾವಿರ ಮೌಲ್ಯದ ಬೆಳ್ಳಿ, 30 ಸಾವಿರ ಮೌಲ್ಯದ ಬಂಗಾರದ ಕೊರಳ ಚೈನ್, 40 ಸಾವಿರ ನಗದು ಕಳವು ಮಾಡಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕು ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಟೋ ಡಿಕ್ಕಿ: ಹಣ್ಣಿನ ವ್ಯಾಪಾರಿ ಸಾವು
ಪ್ರಯಾಣಿಕರ ಆಟೋ ಡಿಕ್ಕಿ ಹೊಡೆದು ತಳ್ಳುವ ಗಾಡಿ ಹಣ್ಣಿನ ವ್ಯಾಪಾರಿ ಮೃತಪಟ್ಟಿರುವ ಘಟನೆ ಇಲ್ಲಿನ ಕೆ.ಆರ್. ಮಾರ್ಕೆಟ್ ಹಳೇ ಗುಜರಿ ಲೈನ್ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಜಗಳೂರಿನ ಕಬ್ಬಿಣದ ಅಂಗಡಿಗೆ ಬೆಂಕಿ : ಅಪಾರ ಹಾನಿ
ಜಗಳೂರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ನಿನ್ನೆ ತಡ ರಾತ್ರಿ ಕಬ್ಬಿಣ ತಯಾರಿಕೆ ಅಂಗಡಿ ಹಾಗೂ ಮಳಿಗೆಯೊಳಗಿನ ಪರಿಕರಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ವಾಗಿದೆ.
ಟಿಪ್ಪರ್ ಲಾರಿ ಡಿಕ್ಕಿ: ಮಹಿಳೆ ಸಾವು
ತನ್ನ ತಾಯಿ ಮತ್ತು ಮಗಳ ಸಹಿತ ಸಾಗುತ್ತಿದ್ದ ಶುಶ್ರೂಷಕರೋರ್ವರ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶುಶ್ರೂಷಕನ ತಾಯಿ ಮೃತಪಟ್ಟಿರುವ ಘಟನೆ ಇಲ್ಲಿನ ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೆಗೆ ಕನ್ನ: ನಗದು-ಚಿನ್ನಾಭರಣ ಕಳವು
ಮನೆಗೆ ಕನ್ನ ಹಾಕಿರುವ ಕಳ್ಳರು 12 ಗ್ರಾಂ ತೂಕದ 48 ಸಾವಿರ ಮೌಲ್ಯದ ಬಂಗಾರದ ಸರ, 5 ಗ್ರಾಂ ತೂಕದ 20 ಸಾವಿರ ಮೌಲ್ಯದ ಬಂಗಾರದ ಎರಡು ಕಿವಿಯೋಲೆಗಳು ಹಾಗೂ 15 ಸಾವಿರ ನಗದು ದೋಚಿದ್ದಾರೆ.