ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ವೇಗ ನೀಡಿ

ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ವೇಗ ನೀಡಿ

ಮಾನ್ಯರೇ,

ದಿನದಿಂದ ದಿನಕ್ಕೆ ಮಹಾನಗರ ಪಾಲಿಕೆಯ ಮುಂದಿನ ಪಿ.ಬಿ. ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ. ಹಳೆ ಕೋರ್ಟು ರಸ್ತೆಯಿಂದ ಬರುವ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿಂದ ವಿಪರೀತವಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ಮಾತ್ರವಲ್ಲ ದ್ವಿಚಕ್ರ ವಾಹನ ಸವಾರರಿಗೂ ಸಂಚರಿಸುವುದು ಕಠಿಣವಾಗಿದೆ.

ನಗರ ಸಾರಿಗೆ, ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಎಲ್ಲವೂ ಒಂದೇ ಕಡೆ ಕೂಡಿಕೊಳ್ಳುತ್ತಿ ರುವುದರಿಂದ ಕಷ್ಟವಾಗಿರುತ್ತದೆ. ಪಾಲಿಕೆ ಎದುರು ಭಾಗದ ರಸ್ತೆಯ ತುಂಬಾ ಕಿರಿದಾದ ಪ್ರದೇಶವಾಗಿದೆ. ಆದ್ದರಿಂದ ಈ ಕೂಡಲೇ ನಿರ್ಮಾಣ ಹಂತದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ವೇಗವಾಗಿ ಮುಗಿಸಬೇಕೆಂದು ಅಥವಾ ಬಸ್ಸುಗಳು ನಿಲ್ಲಲು ಸಹಕರಿಸುವ ಹಾಗೇ ಕಟ್ಟಡದ ಕೆಳಭಾಗದ ನಿರ್ಮಾಣ ವನ್ನು ಮೊದಲ ಹಂತದಲ್ಲಿ ಪೂರ್ಣವಾಗಿ ಮುಗಿಸಿದಲ್ಲಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ.

– ವೈ.ವಿ. ಭಟ್, ವಕೀಲರು, ಎಸ್.ಪಿ.ಎಸ್.ನಗರ, ದಾವಣಗೆರೆ.