ಕುರ್ಕಿಯಲ್ಲಿ ವಿಠಲ ರುಖುಮಾಯಿ ದಿಂಡಿ ಉತ್ಸವ

ಕುರ್ಕಿಯಲ್ಲಿ ವಿಠಲ ರುಖುಮಾಯಿ ದಿಂಡಿ ಉತ್ಸವ

ದಾವಣಗೆರೆ, ಜ.23- ತಾಲ್ಲೂಕಿನ ಕುರ್ಕಿ ಗ್ರಾಮದ  ಬುಳ್ಳಾಪುರ ಗ್ರಾಮದಲ್ಲಿ ಶ್ರೀ ವಿಠ್ಠಲ ರುಖುಮಾಯಿ ದೇವರ ದಿಂಡಿ ಉತ್ಸವ ಇಂದು ಜರುಗಿತು.  ನೂತನ ವಿಠ್ಠಲ ರುಖುಮಾಯಿ ದೇವರ ದೇವಸ್ಥಾನವನ್ನು ಅತಿ ಶೀಘ್ರದಲ್ಲೇ ಕಾರ್ತಿಕ ಮಾಸದಲ್ಲಿ ನಿರ್ಮಾಣವಾಗಲಿ ಎಂದು ಗ್ರಾಮದ ಎಲ್ಲಾ ಭಕ್ತರು ವಾರಕರಿ ಸಂತರು  ಹಾರೈಸಿ ವಾಗ್ದಾನ ನೀಡಿದರು. 

ವಾರಕರಿ ಸಂತರು ಕೀರ್ತನೆ,  ಕಾಕಡಾರತಿ ಭಜನೆಯನ್ನು ನಿಂಗಸ್ವಾಮಿ ರಾವ್ ಖಮಿತ್ಕರ್ ಶ್ರೀ ಹ.ಭ.ಪ ಮಾರುತಿ ವಂಟಕರ್ ಮಂಜುನಾಥ್ ಮಾಂಡ್ರೆ ಶ್ರೀ ಹ.ಭ.ಪ ಚಂದ್ರಕಾಂತ ವಾದೋನಿ ವಿಠ್ಠಲ ವಂಟಕರ್, ರಾಘವೇಂದ್ರ ನವಲೆ, ಮಂಜುನಾಥ್ ಸರ್ವದೆ ಮತ್ತು ಇತರರು ನಡೆಸಿಕೊಟ್ಟರು ಎಂದು ವಿಠ್ಠಲ ಮಂದಿರದ ನಿರ್ಮಾಣ ಮುಖ್ಯಸ್ಥ ತಿಪ್ಪಮ್ಮ ತಿಳಿಸಿದ್ದಾರೆ.