ದೇಶವನ್ನು ಕಟ್ಟಲು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ

ದೇಶವನ್ನು ಕಟ್ಟಲು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಿ

ಹರಿಹರ, ಜ. 17- ಯುವಕರು ಈ ದೇಶದ ಶಕ್ತಿ, ಸದೃಢ ಭಾರತ ಕಟ್ಟಲು ತಾವು ಗಳು ಜೀವನ ದಲ್ಲಿ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.

ನಗರದ ಎಸ್‍ಜೆವಿಪಿ ಕಾಲೇಜು ಸಭಾಂಗಣ ದಲ್ಲಿ ತಾಲ್ಲೂಕು ಆಡಳಿತ, ತಾಪಂ, ಆರೋಗ್ಯ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶ್ರೀ ಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಕಾಲೇಜು ಇವರ ಸಹಯೋಗದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಶುಕ್ರವಾರ ಆಯೋಜಿಸಿದ್ದ `ಗುಲಾಬಿ ಹಿಡಿ, ತಂಬಾಕು ಬಿಡಿ’ ಜಾಗೃತಿ   ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಕಿ-ಅಂಶಗಳ ಪ್ರಕಾರ 14.8 ರಷ್ಟು ಯುವಕರು ಮತ್ತು ಯುವತಿಯರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಐ ಯು.ಸತೀಶ್ ಮಾತನಾಡಿ, ಶೈಕ್ಷ ಣಿಕ ಸಂಸ್ಥೆಯಿಂದ 100 ಗಜದ ಸುತ್ತಳತೆ ಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡು ವುದು ಅಪರಾಧ. ಕಾಲೇಜ್ ಅಂಗಳ ದಲ್ಲಿ ಯುವಕರು  ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡಿದಲ್ಲಿ ಅಂಥವರ ಮೇಲೂ ಕಾನೂನಿನ ಅಡಿಯಲ್ಲಿ ಪ್ರಾಚಾರ್ಯರು ಕ್ರಮ ತೆಗೆದುಕೊಳ್ಳಬಹುದೆಂದರು.

ಸಂಸ್ಥೆಯ ಸಿಇಒ ಡಾ.ಎಸ್.ಹೆಚ್. ಪ್ಯಾಟಿ ಮಾತನಾಡಿ, ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಬದುಕಿನಲ್ಲಿ ಪ್ರಮುಖವಾಗಿ ಶಿಸ್ತನ್ನು ರೂಢಿಸಿಕೊಳ್ಳಬೇಕೆಂದರು. 

ತಾಲ್ಲೂಕು ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಶೇಖರ್ ಗೌಡ ಪಾಟೀಲ್ ಮಾತನಾಡಿ,  ಈ ದೇಶದಲ್ಲಿ ಹುತಾತ್ಮರಾದ ಮಹಾತ್ಮರು, ಸಂತರು, ಚಿಂತಕರು, ಕವಿಗಳು ಹಾಗೂ ಹೋರಾಟಗಾರರ ಬದುಕು ಯುವಜನರಿಗೆ ಆದರ್ಶವಾಗಬೇಕು ಎಂದರು.

ಟಿಎಚ್‍ಒ ಡಾ.ಚಂದ್ರಮೋಹನ್ ಪ್ರಸ್ತಾವನೆ ಮಾಡಿ `ಗುಲಾಬಿ ಹಿಡಿ, ತಂಬಾಕು ಬಿಡಿ’ ಎಂಬ ಘೋಷ ವಾಕ್ಯದೊಂದಿಗೆ ಯುವಕರು ತಂಬಾಕು ಉತ್ಪನ್ನಗಳ ದುಶ್ಚಟಕ್ಕೆ ಬಲಿಯಾಗುವುದನ್ನು ತಡೆಯಲು ಜಾಗೃತಿ ಮೂಡಿಸುವುದು  ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಜಿ.ಎಂ. ಮುರಿಗಿಸ್ವಾಮಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಕ  ಎಂ.ಉಮ್ಮಣ್ಣ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ದೇವರಾಜ್, ಸಾಮಾಜಿಕ ಕಾರ್ಯಕರ್ತ ಸತೀಶ್, ಸುಧಾ ಸುಲಾಕಿ, ದಾದಾಪೀರ್ ಹಾಗೂ ಇತರರಿದ್ದರು.