ದೇಶದ ಪವಿತ್ರ ಗ್ರಂಥ ಸಂವಿಧಾನ

ದೇಶದ ಪವಿತ್ರ ಗ್ರಂಥ ಸಂವಿಧಾನ

ಜಗಳೂರಿನ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಕೆ.ಪಿ. ಪಾಲಯ್ಯ

ಜಗಳೂರು, ಡಿ.6- ದೇಶದ ಪವಿತ್ರ ಗ್ರಂಥ ಸಂವಿಧಾನವಾಗಿದ್ದು, ಸಂವಿಧಾನವನ್ನು ಪ್ರತಿಯೊಬ್ಬರೂ ಒಪ್ಪಿಕೊಂಡು ಉನ್ನತ ಶಿಖರದಲ್ಲಿ ಮೆರೆಸಬೇಕಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಕೆ.ಪಿ. ಪಾಲಯ್ಯ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ನೇತೃತ್ವ ಹಮ್ಮಿಕೊಂಡಿದ್ದ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ‌ಸಲ್ಲಿಸಿ ಅವರು ಮಾತನಾಡಿದರು.

ಶೀಘ್ರ ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ಪಕ್ಷಾತೀತ ಜಾತ್ಯತೀತವಾಗಿ ಕೈ ಜೋಡಿಸಬೇಕಿದೆ. ಎಲ್ಲಾ ವರ್ಗಗಳಲ್ಲಿನ ಶೋಷಿತರು ದಲಿತರೇ, ಇದನ್ನು ಅರಿಯದವರು ಅಂಬೇ ಡ್ಕರ್ ಅವರನ್ನು ವಿರೋಧಿಸುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ‌ ಶಿಕ್ಷಣ ಕೊಡಿಸುವ ಮೂಲಕ ಶೋಷಿತ ಸಮಯದಾಯಗಳ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಹೋರಾಟ ರೂಪಿಸಬೇಕಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಪರಿನಿರ್ವಾಣ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದವರನ್ನು ಒಗ್ಗೂಡಿಸಿ  ಅದ್ಧೂರಿಯಾಗಿ ಆಚರಿಸಬೇಕಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಕೊನೆಗಾಣಬೇಕಿದೆ. ದಲಿತರ ಬದುಕಿನ ಅಜ್ಞಾನ ಅಂಧಕಾರವನ್ನು ಹೋಗಲಾಡಿಸಲು ಬೆಳಕು ಚೆಲ್ಲಿದ ಅಂಬೇಡ್ಕರ್ ನಿಜವಾದ ಸೂರ್ಯನಾಗಿದ್ದು, ಯುವ ಸಮೂಹ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಪ.ಪಂ ಅಧ್ಯಕ್ಷ ಸಿದ್ದಪ್ಪ, ಪ.ಪಂ ಉಪಾಧ್ಯಕ್ಷೆ ಮಂ ಜಮ್ಮ, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡ ,  ಕಲ್ಲೇಶ್ ರಾಜ್ ಪಟೇಲ್, ಸಿ. ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಓಬಣ್ಣ, ಬಿ.ಲೋಕೇಶ್, ಪ್ರಾಂಶು ಪಾಲ ನಾಗಲಿಂಗಪ್ಪ, ರಾಜಶೇಖರ್, ಡಿ.ಎಸ್. ಎಸ್. ತಾಲ್ಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್ , ವೆಂಕ ಟೇಶ್, ಶಿವಣ್ಣ, ಹಟ್ಟಿ ತಿಪ್ಪೇಸ್ವಾಮಿ, ಚಂದ್ರಪ್ಪ, ವಕೀಲ ರಾದ ಮರೇನಹಳ್ಳಿ ಬಸವರಾಜ್, ಸಣ್ಣಓಬಯ್ಯ, ಹನು ಮಂತಪ್ಪ, ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.