ಸಿರಿಧಾನ್ಯ ರೈತರಿಗೆ ಆದಾಯ, ಜನರಿಗೆ ಆರೋಗ್ಯ

ಸಿರಿಧಾನ್ಯ ರೈತರಿಗೆ ಆದಾಯ, ಜನರಿಗೆ ಆರೋಗ್ಯ

ದಾವಣಗೆರೆ, ಡಿ. 5 – ಕೃಷಿ ತಂತ್ರಜ್ಞಾನ ಮಾಹಿತಿ ಸಪ್ತಾಹದ ಅಂಗ ವಾಗಿ ನಗರದ ಐಸಿಎಆರ್- ತರಳ ಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿ ವಾರ ಹಾಗೂ ಭಾನುವಾರ ಆಯೋಜಿ ಸಲಾಗಿದ್ದ ರಾಜ್ಯಮಟ್ಟದ ನ್ಯೂಟ್ರಿ ಸಿರಿಧಾನ್ಯ ಮೇಳಕ್ಕೆ ನೂರಾರು ಜನರು ಭೇಟಿ ಮಾಡಿದ್ದು, ಸಿರಿ ಧಾನ್ಯಕ್ಕೆ ಸೈ ಎಂದಿದ್ದಾರೆ. ರಾಜ್ಯ ಮಟ್ಟದ ಸಿರಿಧಾನ್ಯ ಮೇಳದಲ್ಲಿ ದಾವಣಗೆರೆಯಷ್ಟೇ ಅಲ್ಲದೇ ಬಾಗಲಕೋಟೆ, ಬೆಂಗಳೂರು, ಮೈಸೂರು ಮುಂತಾದ ಜಿಲ್ಲೆಗಳ ಕೃಷಿ ಉದ್ಯಮಿಗಳು 30 ಮಳಿಗೆಗಳನ್ನು ತೆರೆದಿದ್ದರು.

ಸಿರಿ ಧಾನ್ಯಗಳು ಹಾಗೂ ತರಹೇವಾರಿ ವಿಧದ ದೇಶೀಯ ಅಕ್ಕಿಯಷ್ಟೇ ಅಲ್ಲದೇ, ಹಪ್ಪಳ -ಸಂಡಿಗೆ ಗಳಿಂದ ಹಿಡಿದು ನನ್ನಾರಿ ಜ್ಯೂಸ್ – ಕೋಕಮ್ ರೀತಿಯ ಹತ್ತಾರು ಉತ್ಪನ್ನಗಳು ಗ್ರಾಹಕರನ್ನು ಸೆಳೆದಿದ್ದವು.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್, ಸಿರಿ ಧಾನ್ಯ ಮನೆ ಧಾನ್ಯ ಆಗಬೇಕು ಎಂಬ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಅದರಲ್ಲೂ ದಾವಣಗೆರೆ ಯನ್ನು ಸಿರಿಧಾನ್ಯಗಳ ಜಿಲ್ಲೆ ಎಂದು ಕೇಂದ್ರ ಸರ್ಕಾರ ಗುರುತಿಸಿರುವುದರಿಂದ ಇಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು.

ದಿನಕ್ಕೊಂದು ಸಿರಿಧಾನ್ಯದ ಅಡುಗೆ ಮಾಡುವುದರಿಂದ ಆರೋಗ್ಯ ಹಾಗೂ ಕೃಷಿಕರಿಗೆ ಆದಾಯ ಸಿಗುತ್ತದೆ. ಇದ ರಿಂದ ಎಲ್ಲರಿಗೂ ಆನಂದವಾಗಲಿದೆ ಎಂದವರು ಹೇಳಿದರು.

ಸಿರಿಧಾನ್ಯದ ಬಗ್ಗೆ ರೈತರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಆದರೆ, ಸಂಸ್ಕ ರಣೆಯ ಸವಾಲುಗಳಿವೆ. ಇದಕ್ಕಾಗಿ ಹೋಬಳಿ ಮಟ್ಟದಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉದ್ದೇಶಿ ಸಲಾಗಿದೆ. 38 ರೈತರು ಘಟಕಗಳ ಸ್ಥಾಪನೆಗೆ ಮುಂದೆ ಬಂದಿದ್ದು, ಅವ ರಲ್ಲಿ ಅರ್ಧದಷ್ಟು ಜನರು ಸ್ಥಾಪಿಸಿ ದರೂ ಉತ್ತಮ ಬೆಳವಣಿಗೆಯಾ ಗಲಿದೆ ಎಂದು ಹೇಳಿದರು.

ಜನರಿಗೆ ಆಹಾರ ಸಿಗುವು ದಷ್ಟೇ ಅಲ್ಲ, ಪೌಷ್ಠಿಕ ಆಹಾರ ಸಿಗುವುದೂ ಮುಖ್ಯವಾಗಿದೆ. ಇದ ಕ್ಕಾಗಿ ಸೂಕ್ತ ಆಹಾರ ಪದ್ಧತಿ ಹೊಂದಬೇಕಿದೆ ಎಂದ ಅವರು, ಸಿರಿ ಧಾನ್ಯಗಳನ್ನು ಅತಿ ಕಡಿಮೆ ನೀರು ಹಾಗೂ ವೆಚ್ಚದಲ್ಲಿ ಬೆಳೆಯುವುದರಿಂದ ರೈತರಿಗೆ ಇದು ಹೆಚ್ಚು ಆದಾಯ ತರುವ ಮಾರ್ಗ ಎಂದರು.

ಜನರು ಸಿರಿಧಾನ್ಯ ಮೇಳದ ಬಗ್ಗೆ ಅಪಾರ ಆಸಕ್ತಿ ತೋರಿದ್ದಾರೆ. ಹೀಗಾಗಿ ಪ್ರತಿ ವರ್ಷ ಮೇಳ ನಡೆಸಿದರೂ ರೈತರು ಹಾಗೂ ಜನರಿಗೆ ಉಪಯುಕ್ತವಾಗಲಿದೆ ಎಂಬ ವಿಶ್ವಾಸ ತಮಗಿದೆ ಬಂದಿದೆ ಎಂದವರು ತಿಳಿಸಿದ್ದಾರೆ.