ಖಾತೆಗೆ ನೇರವಾಗಿ ಹಣ ಜಮಾಗೆ ಆಗ್ರಹ

ಖಾತೆಗೆ ನೇರವಾಗಿ ಹಣ ಜಮಾಗೆ ಆಗ್ರಹ

ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ

ದಾವಣಗೆರೆ, ನ.30- ಕಟ್ಟಡ ನಿರ್ಮಾಣ ಕಾರ್ಮಿಕರ ಅವಲಂಬಿತ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು ನೋಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ನೇರವಾಗಿ ಈ ಹಿಂದಿನಂತೆ ಹಣ ಜಮಾ ಮಾಡುವುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯವ ಕ್ವಾರಿ ಕಾರ್ಮಿಕರ ಸಂಘದಿಂದ ನಗರದಲ್ಲಿ ಇಂದು ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕಾಂ. ಪಂಪಾಪತಿ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಗಾಂಧಿ ವೃತ್ತದ ಮುಖಾಂತರ ಪಿ.ಬಿ. ರಸ್ತೆ ಮಾರ್ಗವಾಗಿ ಸಾಗಿ ಉಪವಿಭಾಗಾಧಿಕಾರಿ ಕಚೇರಿ ತಲುಪಿತು. ನಂತರ ಉಪವಿಭಾಗಾಧಿಕಾರಿ ಮುಖೇನ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಅವರಿಗೆ  ಮನವಿ ಸಲ್ಲಿಸಲಾಯಿತು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ ಕಟ್ಟಡ ಕಾರ್ಮಿಕರ ಸುಮಾರು 10 ಸಾವಿರ ಕೋಟಿ ರೂ. ಮಂಡಳಿಯಲ್ಲಿರುವ ಹಣ ವನ್ನು ಆ ಕಾರ್ಮಿಕರ ಅವಲಂಬಿತ ಕುಟುಂಬಗಳಿಗೆ ಸದ್ಭಳಕೆಗೆ ಕಲ್ಯಾಣ ಮಂಡಳಿ ಕಾರ್ಯನಿರ್ವಹಿ ಸಬೇಕೆಂದು ಸಂಘದ ರಾಜಾಧ್ಯಕ್ಷ ಆವರಗೆರೆ ಹೆಚ್.ಜಿ. ಉಮೇಶ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ್, ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್, ಕುಂಬಾರ ನಾಗರಾಜ, ಭೀಮಾರೆಡ್ಡಿ, ಶಿವಕು ಮಾರ್ ಡಿ. ಶೆಟ್ಟರ್, ಸುರೇಶ್ ಯರಗುಂಟೆ, ಮುರುಗೇಶ್, ಜಿ.ಆರ್.ನಾಗರಾಜ್, ಮೊಹ ಮ್ಮದ್ ರಫೀಕ್, ಎಸ್.ಎಂ. ಸಿದ್ದಲಿಂಗಪ್ಪ, ಆವರ ಗೆರೆ ಸಿದ್ದಲಿಂಗಪ್ಪ, ಡಿ. ಷಣ್ಮುಗಂ, ಬಿ. ದುಗ್ಗಪ್ಪ, ನಾಗಮ್ಮ, ನೇತ್ರಾವತಿ, ತಿಪ್ಪೇಶ್, ಬಸವರಾಜ್, ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.