ಸರ್ಕಾರ ದಾಸರ ಜೀವನ ಚರಿತ್ರೆಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು

ಸರ್ಕಾರ ದಾಸರ ಜೀವನ ಚರಿತ್ರೆಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು

ಹರಪನಹಳ್ಳಿ : ಪ್ರಕೃತಿ ವಿದ್ಯಾಸಂಸ್ಥೆ ಅಧ್ಯಕ್ಷ ಶಶಿಧರ್ ಪೂಜಾರ್

ಹರಪನಹಳ್ಳಿ, ನ. 29-  ದಾಸ ಶ್ರೇಷ್ಟರ  ಜೀವನ ಚರಿತ್ರೆಗಳು ಪಠ್ಯ ಪುಸ್ತಕಗಳಿಂದ ಕಣ್ಮರೆಯಾಗುತ್ತಿದ್ದು, ಸರ್ಕಾರ ದಾಸ ಶ್ರೇಷ್ಟರ ಜೀವನ ಚರಿತ್ರೆ ಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು ಎಂದು ಪ್ರಕೃತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಶಿಧರ್ ಪೂಜಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಟಿಎಂಎಇಎಸ್ ಪ್ರೌಢಶಾಲಾ ಆವರಣದಲ್ಲಿ ಸ್ವರ ವೈಭವ ಸಾಂಸ್ಕೃತಿಕ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಆಶ್ರಯದಲ್ಲಿ ಕನಕದಾಸರ ಜಯಂತಿ ಪ್ರಯುಕ್ತ ದಾಸೋತ್ಸವ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತ ನಾಡಿ, ಕನಕದಾಸರು ಹರಿದಾಸ ಪರಂಪ ರೆಯನ್ನು ಕರುನಾಡಿನಾದ್ಯಂತ ಪಸರಿಸಿ ದರು. ತಮ್ಮ ಕೀರ್ತನೆಗಳಲ್ಲಿ ಜಾತಿವಾದ ವನ್ನು, ಮೂಢನಂಬಿಕೆಗಳನ್ನು ಕಟುವಾಗಿ ಖಂಡಿಸಿದರು. ಕನಕರ ಕೀರ್ತನೆಗಳು ಸೂರ್ಯಚಂದ್ರರು ಇರುವವರೆಗೆ ಶಾಶ್ವತವಾಗಿ ಇರುತ್ತವೆ ಎಂದರು.

ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಬಿ. ಗೋಣಿಬಸಪ್ಪ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಹೆಚ್. ಮಲ್ಲಿಕಾರ್ಜುನ್, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಬಸವರಾಜ್ ಹುಲಿಯಪ್ಪನವರ್ ಮಾತನಾಡಿದರು.

ಈ ವೇಳೆ ಸ್ವರ ವೈಭವ ಸಾಂಸ್ಕೃತಿಕ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಸವರಾಜ ಭಂಡಾರಿ, ಹಡಗಲಿಯ ವೈ. ರವಿ, ಯುವರಾಜ ಗೌಡ್ರು, ಪರಶುನಾಯ್ಕರ್, ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.