ಯಲ್ಲಮ್ಮನಗರದಲ್ಲಿ ರಾಜ್ಯೋತ್ಸವ

ಯಲ್ಲಮ್ಮನಗರದಲ್ಲಿ ರಾಜ್ಯೋತ್ಸವ

ದಾವಣಗೆರೆ, ನ.29 – ನಗರ ಪಾಲಿಕೆಯ 15ನೇ ವಾರ್ಡ್‍ನ ಯಲ್ಲಮ್ಮ ನಗರದ ಚಡ್ಡಿ ರಾಮಣ್ಣ ಹೋಟೆಲ್ ಬಳಿ 66ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು.

15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಮತ್ತು ಕಾಂಗ್ರೆಸ್ ಮುಖಂಡ ಉಮೇಶ್ ದಂಪತಿ ನೇತೃತ್ವದಲ್ಲಿ ಏರ್ಪಾಡಾಗಿದ್ದ ಈ ಕಾರ್ಯಕ್ರಮವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರು  ಉದ್ಘಾಟಿಸಿದರು.  ನಗರ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಪಾಲಿಕೆ ಸದಸ್ಯರುಗಳಾದ ಗಡಿಗುಡಾಳ್ ಮಂಜುನಾಥ್, ಮೀನಾಕ್ಷಿ ಜಗದೀಶ್, ಜೆ. ಎನ್. ಶ್ರೀನಿವಾಸ್, `ಜನತಾವಾಣಿ’ ಉಪ  ಸಂಪಾದಕ ಇ.ಎಂ.ಮಂಜುನಾಥ,  ಗಾಳೆಪ್ಪ, ಗುರುರಾಜ್, ವಿನಾಯಕ, ರವಿ, ನಾಗರಾಜ್ ಗೌಡ, ದಶರಥ, ಕುಮಾರ್, ಅಣ್ಣಪ್ಪ, ಜಿ. ಚಂದ್ರು,
ಸಿ. ಪ್ರಕಾಶ್, ಗುರು ಸಾಳಂಕಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನ ಸಾಮಾಜಿಕ ಸೇವಾ ಕಾರ್ಯಕರ್ತ ಕೆ.ಎಂ. ವೀರಯ್ಯ ಸ್ವಾಮಿ ಸ್ವಾಗತಿಸಿದರು. ಸಂತೋಷ್ ನಿರೂಪಿಸಿದರು.