ಹಿರಿಯ ಶಾಸಕ ಎಸ್‌ಎಆರ್‌ಗೆ ದೇವರಮನಿ ಶಿವಕುಮಾರ್‌ ಗೌರವಾರ್ಪಣೆ

ಹಿರಿಯ ಶಾಸಕ ಎಸ್‌ಎಆರ್‌ಗೆ ದೇವರಮನಿ ಶಿವಕುಮಾರ್‌ ಗೌರವಾರ್ಪಣೆ

ಮಾಜಿ ಸಚಿವರೂ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕರೂ ಆದ ಎಸ್.ಎ.ರವೀಂದ್ರನಾಥ್ ಅವರ 75ನೇ ಜನ್ಮ ದಿನದ `ಅಮೃತ ಮಹೋತ್ಸವ’ ಕಾರ್ಯಕ್ರಮದ ಸಂದರ್ಭದಲ್ಲಿ, ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್ ಅವರು ರವೀಂದ್ರನಾಥ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗೆ ಸ್ಮರಣಿಕೆ, ಬೃಹತ್ ಪುಷ್ಪಹಾರದೊಂದಿಗೆ ಸನ್ಮಾನಿಸಿ, ಗೌರವಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ್‌ರಾವ್ ಜಾಧವ್  ಮತ್ತಿತರರು ಉಪಸ್ಥಿತರಿದ್ದರು.