ಖನ್ನೂರ ವಿದ್ಯಾನಿಕೇತನ ಕಾಲೇಜಿನಲ್ಲಿ ಕಾಮರ್ಸ್ ಫೋರಂ ಉದ್ಘಾಟನೆ

ಖನ್ನೂರ ವಿದ್ಯಾನಿಕೇತನ ಕಾಲೇಜಿನಲ್ಲಿ ಕಾಮರ್ಸ್ ಫೋರಂ ಉದ್ಘಾಟನೆ

ರಾಣೇಬೆನ್ನೂರು, ನ.23- ಇಲ್ಲಿನ ಖನ್ನೂರ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ  ಕಾಮರ್ಸ್ ಫೋರಂ (ವಾಣಿಜ್ಯ ವೇದಿಕೆ) ಮತ್ತು ಲೋಗೋವನ್ನು  ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು. 

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ಮಹಾದೇವಪ್ಪ ಎಂ. ಖನ್ನೂರ  ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಧ್ಯಕ್ಷ ಡಾ. ಪ್ರವೀಣ ಎಂ. ಖನ್ನೂರ, ಸಿ.ಇ.ಓ.  ಶ್ರೀಮತಿ ಶೈಲಶ್ರೀ ಪಿ. ಖನ್ನೂರ ಭಾಗವಹಿಸಿದ್ದರು. ಪ್ರಾಂಶುಪಾಲ ರಾದ ಎಂ. ದುರ್ಗಾರಾವ್ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಸನ್ನರೆಡ್ಡಿ ಎಂ. ಹೆಚ್., ರಾಜೇಂದ್ರ ಪಾಸ್ತೆ, ಶ್ರೀಮತಿ ವನಿತಾ ಕೆ.ಎನ್ , ಅಣ್ಣಪ್ಪ, ಕಿರಣ  ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಾದ ಕು. ರಾಶಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕು.ನಿಧಿ. ಆರ್.ಜೆ. ಸ್ವಾಗತಿಸಿ ದರು. ಅಭಿಷೇಕ್ ವಂದಿಸಿದರು, ಭೂಮಿ ಕೆ. ಹಾಗೂ ಕಿಶನ್ ನಿರೂಪಿಸಿದರು.