ಶ್ರೀ ಸಂಗನಬಸವ ಸ್ವಾಮೀಜಿಗೆ ಎಸ್ಸೆಸ್ – ಎಸ್ಸೆಸ್ಸೆಂ ಸಂತಾಪ

ಶ್ರೀ ಸಂಗನಬಸವ ಸ್ವಾಮೀಜಿಗೆ ಎಸ್ಸೆಸ್ – ಎಸ್ಸೆಸ್ಸೆಂ ಸಂತಾಪ

ದಾವಣಗೆರೆ, ನ.22 –  ಇಂದು ಲಿಂಗೈಕ್ಯರಾದ ಗದಗ ಜಿಲ್ಲೆಯ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನಬಸವ ಮಹಾಸ್ವಾಮೀಜಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ  ಡಾ. ಶಾಮನೂರು ಶಿವಶಂಕರಪ್ಪ, ಮಹಾಸಭಾ ಉಪಾಧ್ಯಕ್ಷರುಗಳಾದ ಎಸ್.ಎಸ್. ಗಣೇಶ್, ಎ.ಎಸ್.ವೀರಣ್ಣ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯ, ಹೊರ ರಾಜ್ಯಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿದ್ದ ಶ್ರೀಗಳವರು ಇತ್ತೀಚೆಗೆ ಕಿರಿಯ ಉತ್ತರಾಧಿಕಾರಿಗಳಾದ ಶ್ರೀ  ಮುಪ್ಪಿನ ಬಸವಲಿಂಗ ದೇವರು ಅವರಿಗೆ ನಿರಂಜನ ಪಟ್ಟಾಧಿಕಾರ ವಹಿಸಿ ಕೊಟ್ಟಿದ್ದರು ಎಂದು ಎಸ್ಸೆಸ್ ಸ್ಮರಿಸಿದ್ದಾರೆ.