ತಾಯಿ, ಜನ್ಮ ಭೂಮಿ, ಮಾತೃ ಭಾಷೆ ಸ್ವರ್ಗಕ್ಕಿಂತ ಮಿಗಿಲು

ತಾಯಿ, ಜನ್ಮ ಭೂಮಿ, ಮಾತೃ ಭಾಷೆ ಸ್ವರ್ಗಕ್ಕಿಂತ ಮಿಗಿಲು

ಇತರೆ ಭಾಷೆ ಶ್ರೇಷ್ಠ, ಕನ್ನಡ ಕನಿಷ್ಠವೆಂಬ ಕೀಳರಿಮೆ ಬೇಡ

ಬೇರೆ ಭಾಷೆ ಬಳಸಿದರೆ ಶ್ರೇಷ್ಠ, ಜಾನಿಗಳು. ಆದರೆ ಕನ್ನಡ ಭಾಷೆ ಬಳಸಿದರೆ ಕನಿಷ್ಠ ಮತ್ತು ವಿದ್ಯಾವಂತರಲ್ಲ ಎಂಬ ಕೀಳರಿಮೆಯ ಭ್ರಮೆ ಸಹಜವಾಗಿದೆ. ಕೆಲವೊಮ್ಮೆ ಪ್ರತಿಷ್ಠೆಗಾಗಿ ಬೇರೆ ಭಾಷೆಯ ಅರ್ಥ ಗೊತ್ತಿಲ್ಲದೇ, ಆ ಭಾಷೆಯನ್ನೂ ಸರಿಯಾಗಿ ಮಾತನಾಡದೇ ಅದಕ್ಕೆ ಅಗೌರವ ತರುವ ಕೆಲಸದ ಜೊತೆಗೆ ಮಾತೃ ಭಾಷೆ ಕನ್ನಡವನ್ನು ಬಳಸದೇ ಕೀಳಾಗಿ ಕಾಣುವ ಮನಸ್ಥಿತಿ ಸಲ್ಲದು. ನಾವುಗಳು ಹೆಚ್ಚಾಗಿ ಕನ್ನಡವನ್ನು ಬಳಸಿ, ಬೆಳೆಸೋಣ, ಕನ್ನಡವನ್ನೇ ನಮ್ಮ ಉಸಿರಾಗಿಸಿಕೊಳ್ಳೋಣ. ಕನ್ನಡಾಭಿಮಾನ ಹೊಂದೋಣ.

– ಎಸ್.ಟಿ. ವೀರೇಶ್, ಮಹಾಪೌರ.

ಸಿದ್ದಗಂಗಾ ಶಾಲೆಯಲ್ಲಿನ ಲಕ್ಷ ಕಂಠಗಳ ಗೀತೆ ಗಾಯನ ಅಭಿಯಾನದಲ್ಲಿ ಮೇಯರ್ ವೀರೇಶ್ ಅಭಿಮತ

ದಾವಣಗೆರೆ, ಅ.28- ಜನ್ಮ ಕೊಟ್ಟ ತಾಯಿ, ಅನ್ನ ಕೊಟ್ಟ ಜನ್ಮ ಭೂಮಿ, ನಾವಾಡುವ ಮಾತೃ ಭಾಷೆ ಸ್ವರ್ಗಕ್ಕಿಂತ ಮಿಗಿಲು ಮತ್ತು ಪವಿತ್ರವಾದದ್ದು ಎಂದು ನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.

ಅವರು, ಇಂದು ಮಧ್ಯಾಹ್ನ ನಗರದ ಸಿದ್ದಗಂಗಾ ಶಾಲೆ ಆವರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ 99ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ §ಕನ್ನಡಕ್ಕಾಗಿ ನಾವು¬ ಲಕ್ಷ ಕಂಠಗಳ ಗೀತ ಗಾಯನ ಅಭಿಯಾನಕ್ಕೆ ಕನ್ನಡದ ಬಾವುಟ ಹಾರಿಸುವ ಮುಖೇನ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಭಾಷೆಯ ಮಹತ್ವವನ್ನು ಹಿರಿ ಯರು, ಗುರುಗಳು ನೀಡುವ ಮುಖೇನ ಶ್ರೀಮಂತಗೊಳಿಸುವುದರೊಂದಿಗೆ ಜೀವಂತಿಕೆ ಕಾಣುವಂತಾಗಿಸಿದ್ದಾರೆ. ಇತ್ತೀ ಚೆಗೆ ನಾವಾಡುವ ಮಾತೃ ಭಾಷೆ ಕನ್ನಡ ವನ್ನು ಹೆಚ್ಚಾಗಿ ಬಳಸಿ, ಶ್ರೀಮಂತ ಗೊಳಿಸಬೇಕೆಂಬುದನ್ನೇ ಮರೆತಿದ್ದು, ಇತರೆ ಭಾಷೆಗಳ ಮೇಲೆ ಹೆಚ್ಚಿನ ವ್ಯಾಮೋಹವಿಟ್ಟುಕೊಂಡು ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆ ಯನ್ನು ಅಳಿವಿನಂಚಿಗೆ ಹೋಗುವಂತಹ ಪರಿಸ್ಥಿತಿಯನ್ನು ತಂದಿದ್ದೇವೆ. ಇದಕ್ಕೆ ಕನ್ನಡಿಗರಾದ ನಾವುಗಳೇ ಕಾರಣಕರ್ತರು ಎಂದು ಬೇಸರ ವ್ಯಕ್ತಪಡಿಸಿದರು.

ಭಾಷೆಯ ಉಳಿವಿಕೆ ಬೇರೆ ವಸ್ತುಗಳಿಂದ ಮತ್ತು ಬೇರೆ ವ್ಯಕ್ತಿಗಳಿಂದ ಸಾಧ್ಯವಿಲ್ಲ. ಕನ್ನಡಿಗರಾದ ನಾವುಗಳೇ ಉಳಿಸಬೇಕಾಗಿದ್ದು, ಅದು ನಮ್ಮೆಲ್ಲರ ಕರ್ತವ್ಯ. ಕೇವಲ ಕಾರ್ಯಕ್ರಮಗಳಿಂದ ಭಾಷೆ ಉಳಿಸಲು ಆಗುವುದಿಲ್ಲ. ಪ್ರತಿ ದಿನ ನಮ್ಮ ನಡೆ-ನುಡಿ, ವ್ಯವಹಾರಗಳಲ್ಲಿ ಕನ್ನಡ ಭಾಷೆ ಬಳಸಿದಾಗ ಮಾತ್ರ ಬೆಳೆಸಿ, ಮುಂದಿನ ಪೀಳಿಗೆಗೆ ಉಳಿಸಬಹುದಾಗಿದೆ. ಕನ್ನಡಾಭಿಮಾನ ಹೆಚ್ಚಿಸುವ ಕಾರ್ಯಕ್ರಮಗಳು ಹೆಚ್ಚಾಗಿ ಆದಾಗ ಮಾತೃ ಭಾಷೆಯ ಉಳಿವನ್ನು ಕಾಣಬಹುದಾಗಿದೆ ಎಂದು ಹೇಳಿದರು. 

ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿದ್ದು, ಶ್ರೇಷ್ಠವಾದ ಭಾಷೆಗಳ ಪಟ್ಟಿಯಲ್ಲಿ ನಮ್ಮ ಮಾತೃ ಭಾಷೆ ಕನ್ನಡ ಸೇರಿರುವುದು ನಮ್ಮ ಹೆಮ್ಮೆ. ಅನೇಕ ಭಾಷೆಗಳಿಗೆ ಲಿಪಿ ಇರುವುದಿಲ್ಲ, ಹಾಗೇ ನಾದರೂ ಇದ್ದರೂ ಮಾತನಾಡಿದಂತೆ ಬರೆಯಲಾಗಲ್ಲ, ಬರೆದಂತೆ ಮಾತನಾ ಡಲು ಆಗುವುದಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ಕನ್ನಡ ಭಾಷೆ ಲಿಪಿಯಿಂದ ಮಾತನಾಡಿದಂತೆ ಬರೆಯುವ, ಬರೆದಂತೆ ಮಾತನಾಡಬಹುದಾದ ವಿಶೇಷತೆ ಇದೆ. ಇದು ಕನ್ನಡಿಗರಿಗೆ ಹೆಮ್ಮೆ ಮತ್ತು ಗೌರವ ತರಲಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಕನ್ನಡ ಭಾಷೆಯು ಸುಲಭ, ಆರೋಗ್ಯಕರ, ಸಿಹಿ ಎಂಬುದಾಗಿ ಕನ್ನಡದ ಶ್ರೇಷ್ಠ ಕವಿ ಮಹಲಿಂಗ ರಂಗ ಅವರು ತಮ್ಮ ಕವನದ ಮುಖೇನ ವರ್ಣಿಸಿ, ಕನ್ನಡಾಂಬೆಯ ಮಹತ್ವ ಸಾರಿದ್ದು, ಅವರು ನಮ್ಮ ದಾವಣಗೆರೆಯವರು ಎಂದು ಹೇಳಲು ಹೆಮ್ಮೆ ಎನ್ನಿಸುತ್ತಿದೆ ಎಂದರು.

ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳು ಸಾಮೂಹಿಕವಾಗಿ ಕನ್ನಡ ನಾಡು, ನುಡಿಯ ಹಿರಿಮೆ, ಗರಿಮೆ ಹೆಚ್ಚಿಸುವ, ಕನ್ನಡಾಭಿಮಾನ ಮೇಳೈಸುವ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಸಂಗೀತ ರಾ ಘವೇಂದ್ರ, ಕಲಾಕುಂಚದ ಅಧ್ಯಕ್ಷ ಕೆ.ಹೆಚ್. ಮಂಜುನಾಥ್, ಪ್ರಧಾನ ಕಾರ್ಯ ದರ್ಶಿ ಜಿ.ಬಿ. ಲೋಕೇಶ್, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಸತ್ಯಭಾಮ, ಮಹಾಲಿಂಗಪ್ಪ ಸೇರಿದಂತೆ ಇತರರು ಇದ್ದರು.