ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆ

ಮಾನ್ಯರೇ,

ದಾವಣಗೆರೆ ಸಮೀಪದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಉದ್ಯಾನವನಗಳಿವೆ. ಆದರೂ ಸ್ವಚ್ಛತೆ ಇರುವುದಿಲ್ಲ. ಕಸ ವಿಲೇವಾರಿ ವಿಳಂಬವಾಗುತ್ತಿದ್ದು, ಮಕ್ಕಳು ಮತ್ತು ನಾಗರಿಕರು ಆತಂಕದಲ್ಲಿದ್ದಾರೆ.

ಸಣ್ಣ ಸಣ್ಣ ಹೊಂಡಗಳನ್ನು ನಿರ್ಮಿಸಿ, ನೀರು ಸಂಗ್ರಹಿಸಿದರೆ ಅಂತರ್ಜಲ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯಾನವನಗಳ ಸ್ವಚ್ಚತೆ ಕಡೆ ಗಮನ ಹರಿಸಬೇಕು. ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.


– ಕೆ.ಆರ್. ಜಯಪ್ರಕಾಶ್, ಕತ್ತಲಗೆರೆ