ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ

ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ

ಮಲೇಬೆನ್ನೂರು, ಸೆ.15- ಬಿಜೆಪಿಗೆ ಕಾರ್ಯ ಕರ್ತರೇ ಶಕ್ತಿಯಾಗಿದ್ದು, ಅವರ ಉತ್ಸಾಹ, ಹೋರಾ ಟದಿಂದಲೇ ಪಕ್ಷ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಹರಿಹರ ತಾಲ್ಲೂಕು ಗ್ರಾಮಾಂತರ ಬಿಜೆಪಿ ವತಿಯಿಂದ ಭಾನುವಳ್ಳಿ ಗ್ರಾಮದಲ್ಲಿ ಇಂದು ಏರ್ಪಾಡಾಗಿದ್ದ ಬಿಜೆಪಿ ಮುಖಂಡ ಬಾರ್ಕಿ ಮಂಜಪ್ಪ ಅವರ ಸಂತಾಪ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಾರ್ಕಿ ಮಂಜಪ್ಪ ಅವರು ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಸಂಘಟನೆಗಾಗಿ ದುಡಿದವರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಜಪ್ಪ ಅವರ ಅಗಲಿಕೆ ಅವರ ಕುಟುಂಬಕ್ಕೆ ಅಷ್ಟೇ ಅಲ್ಲ.  ಪಕ್ಷಕ್ಕೂ ನಷ್ಟ ತಂದಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಹೇಳಿದರು. 

ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಭದ್ರಾ ಕಾಡಾ ಸದಸ್ಯ ಗೋವಿನಹಾಳ್ ರಾಜಣ್ಣ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶ ವಂತ್‌ರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವ ಕುಮಾರ್, ಹರಿಹರ ತಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಮಾಜಿ ಅಧ್ಯಕ್ಷ ಕೆ.ಹೆಚ್.ನಾಗನಗೌಡ, ತಾ.ಬಿಜೆಪಿ ಪ್ರಧಾನ ಕಾರ್ಯದ ರ್ಶಿಗಳಾದ ಆದಾಪುರ ವೀರೇಶ್, ಹುಗ್ಗಿ ಮಹಾಂತೇಶ್, ಮುಖಂಡರಾದ ಬೆಳ್ಳೂಡಿ ಬಕ್ಕೇಶ್, ಸಾರಥಿ ಹೊನ್ನಪ್ಪ, ಕೆ.ಎನ್.ಹಳ್ಳಿಯ ಅಶೋಕ್, ಜಿಗಳಿಯ ಸಿ.ಎನ್.ಪರಮೇಶ್ವರಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

ಮಾಜಿ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮುಖಂಡರಾದ ಸಿರಿಗೆರೆ ನಾಗನಗೌಡ, ಚಂದ್ರಶೇಖರ್ ಪೂಜಾರ್ ಅವರು ಬಾರ್ಕಿ ಮಂಜಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.