ಎಸ್ಸೆಸ್, ಎಸ್ಸೆಸ್ಸೆಂರಿಂದ ವಕೀಲರಿಗೆ ಲಸಿಕಾ ಶಿಬಿರ

ಎಸ್ಸೆಸ್, ಎಸ್ಸೆಸ್ಸೆಂರಿಂದ ವಕೀಲರಿಗೆ ಲಸಿಕಾ ಶಿಬಿರ

ದಾವಣಗೆರೆ, ಸೆ.14- ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಶಾಮನೂರು ಮಲ್ಲಿಕಾರ್ಜುನ್‍ ಅವರು ಗಳು ಉಚಿತವಾಗಿ ಕೊಡಮಾಡಿರುವ ಕೋವಿಡ್ ಲಸಿಕಾ ಶಿಬಿರವು ನಗರದ ವಕೀಲರ ಭವನದಲ್ಲಿ ಇಂದು ನಡೆಯಿತು.

ಲಸಿಕಾ ಕೇಂದ್ರಕ್ಕೆ ಎಸ್ಸೆಸ್ ಭೇಟಿ ನೀಡಿ, ಲಸಿಕೆ ಪಡೆದವರ ಆರೋಗ್ಯ ವಿಚಾರಿಸಿದರು. ಹಿರಿಯ ವಕೀಲರುಗಳಾದ ಎನ್. ಜಯದೇವ ನಾಯ್ಕ, ಎನ್.ಎಂ. ಆಂಜನೇಯ ಗುರೂಜಿ, ಪರಮೇಶ್ ಎಸ್. ಆವರಗೆರೆ, ಲೋಕಿಕೆರೆ ಸಿದ್ದಪ್ಪ, ವಕೀಲರ ಸಂಘದ ಅಧ್ಯಕ್ಷ ಡಿ.ಪಿ.ಬಸವರಾಜ್, ಕಾರ್ಯದರ್ಶಿ ಲೋಕಿಕೆರೆ ಪ್ರದೀಪ್, ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್ ಮತ್ತಿತರರು ಮಾತನಾಡಿ,  ಎಸ್ಸೆಸ್ ಅವರಂತಹ ಸಹೃದಯ ದವರು ದಾವಣಗೆರೆಯಲ್ಲಿರುವುದು ನಮ್ಮೆಲ್ಲರ ಪುಣ್ಯ ಎಂದು ಪ್ರಶಂಸಿಸಿದರು.

ಎಸ್ಸೆಸ್ ತಮ್ಮ ಸ್ವಂತ ಖರ್ಚಿನಲ್ಲಿ ಜನತೆಗೆ ಉಚಿತವಾಗಿ ಲಸಿಕೆ ನೀಡುವುದರೊಂದಿಗೆ  ದೇಶ ದಲ್ಲೇ ಮೊದಲಿಗರು ಎಂದು ಬಣ್ಣಿಸಿದರು.

ಕೆ.ಕೆ.ರಂಗಸ್ವಾಮಿ, ವಿ.ಗೋಪಾಲ್, ಹೆಚ್.ಎಸ್.ಯೋಗೇಶ್, ಹಲಗೇರಿ ಮಂಜಪ್ಪ, ಚೌಡಪ್ಪ, ವಿಶ್ವನಾಥ್, ಕಿರಣ್, ದೇವರಾಜ್, ಬಸವರಾಜ್, ರಾಜನಹಳ್ಳಿ ಸುರೇಶ್, ರಜ್ವಿಖಾನ್, ಸುಷ್ಮಾ ಪಾಟೀಲ್, ಅಲಮೇಲಮ್ಮ, ಈಶ್ವರ್ ನೋಟರಿ, ಶ್ರೀನಿವಾಸ್, ಖಾದರ್, ಎಲ್. ಶ್ಯಾಮ್, ಜಂಟಿ ಕಾರ್ಯದರ್ಶಿ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಶಿಬಿರಕ್ಕೆ ಸಹಕಾರ ನೀಡಿದ ಜಿಲ್ಲಾ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ದಿನೇಶ್
ಕೆ.ಶೆಟ್ಟಿ ಅವರನ್ನು ಹಿರಿಯ ನ್ಯಾಯವಾದಿಯೂ ಆದ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಉಪಾಧ್ಯಕ್ಷ ಎಸ್. ಪರಮೇಶ್ ಅವರು ಸನ್ಮಾನಿಸಿದರು.

Leave a Reply

Your email address will not be published.