ರದ್ದಾದ ಸಂತೆಗೆ ಚಾಲನೆ ನೀಡಿದ ವಾಟ್ಸಾಪ್‌ ಸಂದೇಶ

ರದ್ದಾದ ಸಂತೆಗೆ ಚಾಲನೆ ನೀಡಿದ ವಾಟ್ಸಾಪ್‌ ಸಂದೇಶ

ಹರಿಹರ, ಸೆ.7- ಕೋವಿಡ್‌ ಮುಂಜಾಗ್ರತೆಯ ನಿಟ್ಟಿನಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮೀ ಆದೇಶಿಸಿದ್ದರೂ, ಶಾಸಕ ಎಸ್. ರಾಮಪ್ಪನವರ ಆಪ್ತ ಸಹಾಯಕರ ಹೆಸರಿನಲ್ಲಿ ಹರಿದಾಡಿದೆ ಎನ್ನಲಾದ ವಾಟ್ಸ್‌ಪ್‌ ಸಂದೇಶದಂತೆ ವಾರದ ಸಂತೆ ನಡೆದ ಘಟನೆ ನಡೆದಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನರು ಗುಂಪು ಕೂಡದಂತೆ ಹಲವು ಕಾರ್ಯಕ್ರಮ ಗಳಿಗೆ ಬ್ರೇಕ್‌ ಹಾಕಿರುವ ಸರ್ಕಾರ, ವಾರದ ಸಂತೆಯನ್ನು ಸಹ ರದ್ದು ಮಾಡುವಂತೆ ಆದೇಶ ಮಾಡಿದೆ. ಅದರಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಮಂಗಳವಾರ ನಡೆಯುವ ವಾರದ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ಪೌರಾಯುಕ್ತರು ಪ್ರಕಟಣೆ ಹೊರಡಿಸಿದ್ದರು. ಆದರೆ, ಶಾಸಕ ಎಸ್. ರಾಮಪ್ಪನವರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾದ ವಾಟ್ಸಾಪ್‌ ಸಂದೇಶದ ಪರಿಣಾಮ ಮಾಮೂಲಿ ಯಂತೆ ಮಂಗಳವಾರದ ಸಂತೆ ನಡೆದಿದೆ.