ಪೋಷಣ್ ಅಭಿಯಾನದಲ್ಲಿ ತಹಶೀಲ್ದಾರ್‌ಗೆ ಸೀಮಂತ

ಪೋಷಣ್ ಅಭಿಯಾನದಲ್ಲಿ ತಹಶೀಲ್ದಾರ್‌ಗೆ ಸೀಮಂತ

ಸೀಮಂತ ಖುಷಿ ತಂದಿದೆ ಎಂದು ಹರ್ಷಿಸಿದ ಡಾ. ನಾಗವೇಣಿ

ಜಗಳೂರು, ಸೆ.1- ಗರ್ಭಿಣಿ, ಬಾಣಂತಿ ಯರು ಹಾಗೂ ಮಕ್ಕಳಿಗೆ ಸ್ಥಳೀಯವಾಗಿ ಲಭ್ಯವಾಗುವ ಸೊಪ್ಪು, ತರಕಾರಿ ಸೇರಿದಂತೆ ಕಬ್ಬಿಣಾಂಶಯುಕ್ತ ಆಹಾರ ಪದಾರ್ಥಗಳನ್ನು ಪೂರೈಸಿ ದರೆ ಅಪೌಷ್ಟಿಕತೆ ತೊಲಗಿಸಬಹುದು ಎಂದು ತಹಶೀಲ್ದಾರ್ ಡಾ. ನಾಗವೇಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಗಳ ಸಹ ಯೋಗದಲ್ಲಿ ಹಮ್ಮಿಕೊಂಡಿದ್ದ ಪೋಷ ಣ್ ಅಭಿಯಾನ ಮಾಸಾಚರಣೆಯಲ್ಲಿ ಅವರು ಮಾತನಾಡಿದರು.

ತಾಯಿ ಮತ್ತು ಮಗು ಅನೇಕ ಕಾಯಿಲೆ ಗಳಿಂದ  ಸ್ವಯಂ ರಕ್ಷಣೆಯ ಮುಖ್ಯ ಉದ್ದೇಶದಿಂದ ಸರ್ಕಾರ ಇಲಾಖೆಗಳ‌ ಮೂಲಕ ಹಲವು ಯೋಜನೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದೆ. ಕುಟುಂಬದಲ್ಲಿ‌ ಸಿಗಬೇಕಾದ ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನು ಸರ್ಕಾರವೇ ಮನೆ ಬಾಗಿಲಿಗೆ ತಲುಪಿ ಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸರ್ವ ಕಾಯಿಲೆಗಳ ನಿವಾರಣೆಗೆ ಆಹಾರವೇ ಔಷಧಿಯಾಗಬೇಕು. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಹಾಕಸಿಕೊಳ್ಳುವಂತೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.

ಸೀಮಂತ ಕಾರ್ಯ ಹರ್ಷ ತಂದಿದೆ: ವಿದ್ಯಾವಂತರು, ಉನ್ನತ ಹುದ್ದೆಯಲ್ಲಿರುವವರು ಎಲ್ಲವನ್ನೂ ತಿಳಿದಿರಲು ಸಾಧ್ಯವಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ಅಂಗನವಾಡಿ ಕಾರ್ಯರ್ತೆಯರು, ಮೇಲ್ವಿಚಾರಕರು ನನಗೆ ಗರ್ಭಿಣಿಯರು ಯಾವ ರೀತಿ ಸುರಕ್ಷತೆ ಕಾಪಾಡಿಕೊಳ್ಳಬೇಕು‌ ಎಂಬದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಇಲಾಖೆಯ ಕಾರ್ಯಕ್ರಮದಲ್ಲಿ  ಸೀಮಂತ ಕಾರ್ಯ ಖುಷಿ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಸಿಡಿಪಿಒ ಬೀರೇಂದ್ರ ಮಾತನಾಡಿ, ಪೋಷಣ್ ಅಭಿಯಾನ 2018 ರಲ್ಲಿ ಆರಂಭವಾಗಿದ್ದು, ಸೆ.30‌ ರವರೆಗೆ ಅಭಿಯಾನ ನಡೆಯಲಿದ್ದು, ಮಾತೃವಂದನಾ ಕಾರ್ಯಕ್ರಮದಲ್ಲಿ ಸಿಗಬಹುದಾದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಮೇಲ್ವಿಚಾರಕಿಯರಾದ ಶಾಂತಮ್ಮ, ಟಿ. ಶಾಂತಮ್ಮ, ಅನುರಾಧ, ಆಯುಷ್ಯ ಇಲಾಖೆ ವೈದ್ಯಾಧಿಕಾರಿ ಡಾ.ಶ್ವೇತಾ, ಈಶ್ವರ್, ಧರ್ಮಣ್ಣ, ಕಾರ್ಯಕರ್ತೆಯರಾದ ಹಾಲಮ್ಮ, ಪದ್ಮ, ಭರಮಕ್ಕ, ಶೃತಿ, ಲೀಲಾವತಿ ಇನ್ನಿತರರು ಉಪಸ್ಥಿತರಿದ್ದರು.