ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.2 ರ ಗುರುವಾರದಂದು ಜಿಲ್ಲೆಗೆ ಆಗಮಿಸಲಿದ್ದು, ನಗರದಲ್ಲಿ ನಿರ್ಮಿಸ ಲಾಗಿರುವ ಗಾಂಧಿ ಭವನ ಹಾಗೂ ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಉದ್ಘಾಟಿಸುವರು
ಗಾಳಿಗೆ ತೂರುತ್ತಿರುವ ಧಾರ್ಮಿಕ ಭಾವನೆ, ಮಾನವೀಯ ಮೌಲ್ಯಗಳು
ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಗ್ರಾಮೀಣ ಬಡ ಕಲಾವಿದರ ಪಾತ್ರ ಹಿರಿದು. ಸರ್ಕಾರ ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮುಕ್ತಕಂಠದಿಂದ ಪ್ರಶಂಸಿಸಿದರು.
ಸದಾಶಿವ ಆಯೋಗದ ವರದಿ ಬಹಿರಂಗಕ್ಕೆ ಒತ್ತಾಯ
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಈಗಲಾದರೂ ಬಹಿರಂಗಪಡಿಸಬೇಕು. ಇಲ್ಲವೇ ಚರ್ಚೆಗೆ ಅವಕಾಶ ಕೊಡಬೇಕು ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸ್ಮಾರ್ಟ್ ಸಿಟಿ : ಪಾಲಿಕೆಯ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ
ಸ್ಮಾರ್ಟ್ ಸಿಟಿ ಲಿಮಿಟೆಡ್ ನಿರ್ದೇಶಕರ ಸ್ಥಾನಕ್ಕೆ ನಗರ ಪಾಲಿಕೆಯಿಂದ ಕಾಂಗ್ರೆಸ್ನ ಇಬ್ಬರು ಸದಸ್ಯರನ್ನು ಬಿಟ್ಟು ಬಿಜೆಪಿಯ ನಾಲ್ವರು ಸದಸ್ಯರ ಹೆಸರು ಕಳುಹಿಸಿರುವುದನ್ನು ಆಕ್ಷೇಪಿಸಿ, ಕಾಂಗ್ರೆಸ್ ನ ಪಾಲಿಕೆ ಸದಸ್ಯರು ನಗರ ಪಾಲಿಕೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ಮನೆಯ ಬಾಗಿಲಿಗೆ ನಿಮ್ಮ ಸೇವಕ
ಮಹಾ ನಗರ ಪಾಲಿಕೆಯ 38ನೇ ವಾರ್ಡ್ನ ಪಾಲಿಕೆ ಸದಸ್ಯ ಜಿ.ಎಸ್.ಮಂಜು ನಾಥ್ ಗಡಿಗುಡಾಳ್ ಅವರು ನಗರದ ಎಂಸಿಸಿ `ಬಿ' ಬ್ಲಾಕ್ನ 5ನೇ ಮುಖ್ಯರಸ್ತೆ ಇತರೆ ಭಾಗದಲ್ಲಿ `ಮನೆಯ ಬಾಗಿಲಿಗೆ ನಿಮ್ಮ ಸೇವಕ' ವಿಶೇಷ ಕಾರ್ಯಕ್ರಮದಡಿ ಸಾರ್ವಜನಿಕರ ಅಹವಾಲು, ಸಮಸ್ಯೆ ಆಲಿಸಿದರು.
ಶ್ರೀಮತಿ ಅನ್ನಪೂರ್ಣಮ್ಮ
ದಾವಣಗೆರೆ ಚಾಮರಾಜಪೇಟೆ ವಾಸಿ, ಪ್ರಕಾಶ್ ಪ್ರಿಂಟಿಂಗ್ ಪ್ರೆಸ್ಸ್ ಲೇ. ಬೂಸ್ನೂರು ಷಡಾಕ್ಷರಪ್ಪನವರ ಧರ್ಮಪತ್ನಿ ಶ್ರೀಮತಿ ಅನ್ನಪೂರ್ಣಮ್ಮ ಇವರು ದಿನಾಂಕ : 30.08.2021ರ ಸೋಮವಾರ ಮಧ್ಯಾಹ್ನ 12.54ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಜೆ. ಶಿವಮೂರ್ತಿ
ದೇವರಬೆಳೆಕೆರೆ ರಸ್ತೆಯ ವಾಸಿ ರೈಲ್ವೆ ಇಲಾಖೆ ನಿವೃತ್ತ ಒ.ಎಸ್. ಆಗಿದ್ದ ಶ್ರೀ ಜೆ. ಶಿವಮೂರ್ತಿ ಅವರು ದಿನಾಂಕ 30.08.2021ರ ಸೋಮವಾರ ಮಧ್ಯಾಹ್ನ 2.20 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಸಂಗಪ್ಪಯ್ಯ ಪಟೇಲ್
ದಾವಣಗೆರೆ ಕಿರುವಾಡಿ ಲೇಔಟ್ ನಿವಾಸಿ (ಕಾಟನ್ ಮಿಲ್ ನಿವೃತ್ತ ನೌಕರರು) ರಾಘವೇಂದ್ರ ಆಟೋಮೊಬೈಲ್ಸ್ ನೌಕರರಾಗಿದ್ದ ಶ್ರೀ ಸಂಗಪ್ಪಯ್ಯ ಪಟೇಲ್ ಇವರು ದಿನಾಂಕ ; 30.08.2021ರ ಸೋಮವಾರ ಬೆಳಿಗ್ಗೆ 8.30ಕ್ಕೆ ಲಿಂಗೈಕ್ಯರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.
ಹೊಟ್ಟೇರ ನಾಗರತ್ನಮ್ಮ
ದಾವಣಗೆರೆ ತಾಲ್ಲೂಕು ಆವರಗೆರೆ ಗ್ರಾಮದ ವಾಸಿ ಹೆಚ್.ಸಿ. ಪರಮೇಶ್ವರಪ್ಪ ಅವರ ಧರ್ಮಪತ್ನಿ ಶ್ರೀಮತಿ ಹೊಟ್ಟೇರ ನಾಗರತ್ನಮ್ಮ (41) ಅವರು ದಿನಾಂಕ 30.08.2021ರ ಸೋಮವಾರ ಸಂಜೆ 6.55 ಕ್ಕೆ ನಿಧನರಾದರು.
ಮಹದೇವಪ್ಪ ಚನ್ನಬಸಪ್ಪ ಪಾಟೀಲ್
ದಾವಣಗೆರೆ ಎಂ.ಸಿ.ಸಿ. `ಬಿ' ಬ್ಲಾಕ್ ವಾಸಿ ನಿವೃತ್ತ ಶಿಕ್ಷಕರಾದ ಮಹದೇವಪ್ಪ ಚನ್ನಬಸಪ್ಪ ಪಾಟೀಲ್ (ಎಂ.ಸಿ. ಪಾಟೀಲ್) ಅವರು ದಿನಾಂಕ 30.08.2021ರ ಸೋಮವಾರ ಸಂಜೆ 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.