ಮುಖ್ಯಮಂತ್ರಿಗಳಿಗೆ ವೀರಶೈವ ಮಹಾಸಭಾದಿಂದ ಅಭಿನಂದನೆ

ಮುಖ್ಯಮಂತ್ರಿಗಳಿಗೆ ವೀರಶೈವ ಮಹಾಸಭಾದಿಂದ ಅಭಿನಂದನೆ

ದಾವಣಗೆರೆ, ಆ.19 – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ|| ಶಾಮನೂರು ಶಿವಶಂಕರಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಇಂದು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ, ಸಚ್ಚಿದಾನಂದ, ರೇಣುಕ ಪ್ರಸನ್ನ, ಮಹಾಸಭಾದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಧುರಾ ಅಶೋಕ್, ರಾಜಲಕ್ಷ್ಮೀ, ದಿನೇಶ್ ಕೆ.ಶೆಟ್ಟಿ ಮತ್ತಿತರರಿದ್ದರು.