ಬಾಯಿ ರೋಗಶಾಸ್ತ್ರ ಶೃಂಗ ಸಭೆಗೆ ಬಾಪೂಜಿ ದಂತ ವ್ಯದ್ಯ ವಿದ್ಯಾರ್ಥಿಗಳು

ಬಾಯಿ ರೋಗಶಾಸ್ತ್ರ ಶೃಂಗ ಸಭೆಗೆ ಬಾಪೂಜಿ ದಂತ ವ್ಯದ್ಯ ವಿದ್ಯಾರ್ಥಿಗಳು

ದಾವಣಗೆರೆ, ಆ.19- 2021 ರ ಏಪ್ರಿಲ್‌ನಲ್ಲಿ ಎಸ್‌.ಆರ್‌.ಎಂ. ಕೆಟ್ಟಿಂಕುಳತ್ತೂರು ದಂತ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಬಾಯಿ ರೋಗಶಾಸ್ತ್ರ ಶೃಂಗಸಭೆಯಲ್ಲಿ ನಗರದ ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು ಬಹುಮಾನ ಗಳಿಸಿದ್ದಾರೆ.

ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮೂರನೆ ವರ್ಷದ ಪದವಿಪುರ್ವ ವಿದ್ಯಾರ್ಥಿಗಳು ವೈಜ್ಞಾನಿಕ ಅನ್ವೇಷಣಾ ವಿಷಯ ಮಂಡನೆಯಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದಿರುತ್ತಾರೆ. ಬಾಯಿಯ ಆರೋಗ್ಯ ಎಂಬ ಪ್ರಚಾರ ಮಂಡನೆಯಲ್ಲಿ ದ್ವಿತೀಯ ಬಹುಮಾನ ಗಳಿಸಿರುತ್ತಾರೆ.

ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಜಿ.ಜೆ. ಚಿನ್ಮಯ, ಸೂರಜ್‌ ದಾಸ್‌, ಶಿಫಾಲಿ ಮಾರುತಿ ನಾಯಕ್‌ ಹಾಗೂ ವಿ.ಹೆಚ್‌. ಯೋಗಿತಾ ಅವರಿಗೆ ಬಾಪೂಜಿ ಸಂಸ್ಥೆಯ ಆಡಳಿತ ವರ್ಗ ಬಾಪೂಜಿ ದಂತ ವೈದ್ಯಕೀಯ ನಿರ್ದೇಶಕ ಡಾ. ಕೆ. ಸದಾಶಿವ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.