11 ಪಾಸಿಟಿವ್, 1 ಸಾವು, 5 ಗುಣಮುಖ

ದಾವಣಗೆರೆ, ಆ.18- ಜಿಲ್ಲೆಯಲ್ಲಿ ಬುಧವಾರ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. 5 ಜನ ಗುಣಮುಖ ರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 6, ಚನ್ನಗಿರಿ 2, ಜಗಳೂರು 2 ಹಾಗೂ ಹೊನ್ನಾಳಿ  ತಾಲ್ಲೂಕಿನ  ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 194 ಸಕ್ರಿಯ ಪ್ರಕರಣಗಳಿವೆ.